ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ, ಕುಸ್ತಿಯಲ್ಲಿ ಚಿನ್ನದ ಭರವಸೆ ಹುಟ್ಟಿಸಿದ್ದ ವಿನೇಶ್ ಫೋಗಾಟ್ ಅವರು ಫೈನಲ್ ಪಂದ್ಯದಲ್ಲಿ ಆಡಲು ಅನರ್ಹ ಎಂದು (IOC) ಇಂಟರ್ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ತಿಳಿಸಿದೆ.
ದೇಹದ ತೂಕದಲ್ಲಿ ಹೆಚ್ಚಳವಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಒಲಿಂಪಿಕ್ಸ್ ಪಂದ್ಯದಿಂದ ಭಾರತದ ವಿನೇಶ್ ಪೊಗಾಟ್ ಅವರನ್ನು ಅನರ್ಹಗೊಳಿಸಲಾಗಿದೆ. ದೇಹದ ಒಟ್ಟು ತೂಕದಲ್ಲಿ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣವನ್ನು ನೀಡಿ ಒಲಿಂಪಿಕ್ಸ್ ಕಮಿಟಿ ಅನರ್ಹಗೊಳಿಸಿದೆ. ಈ ಸುದ್ದಿ ಭಾರತಕ್ಕೆ ಆಘಾತ ನೀಡಿದೆ.
ಚಿನ್ನ ಗೆಲ್ಲುವ ವಿನೇಶ್ ಫೋಗಟ್ ಕನಸು ನುಚ್ಚುನೂರು: 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ!
ತಲೆಯ ಮೇಲಿನ ಕೂದಲು ಕೂಡ 100 ಗ್ರಾಂ ತೂಕವನ್ನು ಹೆಚ್ಚಿಸುತ್ತದೆ. ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕೈವಾಡ ಇದರಲ್ಲಿದೆ. ಇದರಲ್ಲಿ ಸರ್ಕಾರ ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕೈವಾಡವಿದೆ ಎಂದು ವಿನೇಶ್ ಫೋಗಟ್ ಅವರ ಮಾವ ರಾಜ್ಪಾಲ್ ರಾಠಿ ಆರೋಪಿಸಿದ್ದಾರೆ.
ಇದೊಂದು ಹೃದಯ ವಿದ್ರಾವಕ ಸುದ್ದಿಯಾಗಿದೆ. ಇದರ ಹಿಂದೆ ಷಡ್ಯಂತ್ರ ಇದೆ. ವಿನೇಶ್ ಜೊತೆ ನಾನಿನ್ನೂ ಮಾತನಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಫೋಗಟ್ ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದೀಗ ಒಲಿಂಪಿಕ್ಸ್ನಲ್ಲೂ ಮುಂದುವರಿದಿದೆ. ಫೋಗಟ್ ಅನರ್ಹ ಮಾಡಿರೋದು ಬೇಸರ ತಂದಿದೆ. ನಿನ್ನೆಯ ಪಂದ್ಯದಲ್ಲಿ ಅವರ ತೂಕ ಹೆಚ್ಚಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
50 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಜಪಾನ್ ಎದುರಾಳಿ ಸೂಸಾಕಿ ಅವರ ವಿರುದ್ದ ಉತ್ತಮ ಪ್ರದರ್ಶನ ನೀಡಿದ್ದ ವಿನೇಶ್ ಫೊಗಾಟ್, ಬಳಿಕ ಆಗಸ್ಟ್ 6 ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ.
ಫೈನಲ್ ಪಂದ್ಯವು ಇಂದು ನಡೆಯಬೇಕಿತ್ತು. ಪಂದ್ಯಕ್ಕೂ ಮುನ್ನ ನಡೆಸಿದ ತೂಕದ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚಾಗಿದೆ. ಈ ಕಾರಣಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿದೆ.