ಕೆಲದಿನಗಳಿಂದ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಾಗಿದ್ದಾರೆ. ಬರುವ ಫೆಬ್ರವರಿ ತಿಂಗಳಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಈ ಕುರಿತು ಇಬ್ಬರೂ ತುಟಿಬಿಚ್ಚಿರಲಿಲ್ಲ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ (Rashmika Mandanna) ಒಟ್ಟಿಗೆ ವಾಸಿಸುತ್ತಿದ್ದಾರೆ. ನಿಶ್ಚಿತಾರ್ಥವಾದ ಬಳಿಕ ತಮ್ಮ ಸಂಬಂಧವನ್ನು ಬಹಿರಂಗಪಡಿಲಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿತ್ತು. ಆದರೆ ಇಬ್ಬರು ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆದರೆ ಇದೀಗ ನಟ ವಿಜಯ್ ದೇವರಕೊಂಡ ಅವರೇ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ರಶ್ಮಿಕಾ ಮಂದಣ್ಣ ಅವರೊಂದಿಗಿನ ನಿಶ್ಚಿತಾರ್ಥದ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದರು. ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಅಥವಾ ಮದುವೆಯಾಗುವುದಿಲ್ಲ. ಮೀಡಿಯಾದವರು ನನ್ನನ್ನು ಎರಡು ವರ್ಷಗಳಿಗೊಮ್ಮೆ ಮದುವೆಯಾಗಲು ಬಯಸುತ್ತಾರೆ ಎಂದನಿಸುತ್ತದೆ . ಪ್ರತಿ ವರ್ಷ ನಾನು ಈ ವದಂತಿಯನ್ನು ಕೇಳುತ್ತಲೇ ಬಂದಿದ್ದೇನೆ. ನನ್ನ ಮದುವೆಗೋಸ್ಕರ ಅವರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ