ಹುಬ್ಬಳ್ಳಿ : ಅಂಗನವಾಡಿ ಅಹಾರ ಅಕ್ರಮ ಸಂಬಂಧ ಕಸಬಾಪೇಟೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮೀಷನರ್ ಶಶಿಕುಮಾರ್ , ಕರ್ತವ್ಯ ಲೋಪ , ಗುಪ್ತ ಮಾಹಿತಿ ಸಂಗ್ರಹಿಸಿದ ಹಿನ್ನಲೆ ಇಬ್ಬರು ಸಿಬ್ಬಂದಿ ಅಮಾನತು ಮಾಡಲಾಗಿದ್ದು, ಅಕ್ರಮ ಕೇಸ್ ವಿಚಾರವಾಗಿ ಪ್ರಮುಖ ಇಬ್ಬರು ಆರೋಪಿಗಳಿಗೆ ಲುಕ್ ಔಟ್ ನೋಟಿಸ್ ಜಾರಿಮಾಡಲಾಗಿದೆ. ಇನ್ನೂ ಪ್ರಕರಣಕ್ಕೆ ಸಂಭಂಧಿಸದಂತೆ ಈ ವರೆಗೂ 32 ಜನರ ಬಂಧನವಾಗಿದೆ. ಆದರೆ ಪ್ರಮುಖ ಆರೋಪಿಗಳ ನಾಪತ್ತೆಯಾಗಿದ್ದಾರೆ. ಇದುವರೆಗೂ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ ಎಂದರು.
ಇನ್ನೂ, ಆರೋಪಿಗಳ ಪತ್ತೆಯಲ್ಲಿ ಪೊಲೀಸ್ ಕಮೀಷನರ್ ಪೆಲ್ಯೂವರ್ ಎಂಬ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಗಂಭೀರ ಪ್ರಕರಣ,ನಾನು ಸದನದಲ್ಲಿ ಶಾಸಕರು ಮಾತಾಡಿರೋದಕ್ಕೆ ರಿಯಾಕ್ಟ್ ಮಾಡಲ್ಲ. ಆದರೆ ಗಂಭೀರ ಪ್ರಕರಣವಾಗಿರೋ ಕಾರಣ ,ಶಾಸಕರು ಮಾತಾಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ,ನಾವು ಕೂಡಾ ರಾಜ್ಯ ಹೊರ ರಾಜ್ಯದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ. ಆದಷ್ಟು ಬೇಗ ಪ್ರಮುಖ ಆರೋಪಿಗಳ ಬಂಧಿಸಲಾಗುತ್ತೆ ಎಂದರು.