ಶಿವಮೊಗ್ಗ:- ಕೊಟ್ಟಿರುವ ಜವಾಬ್ದಾರಿ ವಿಜಯೇಂದ್ರ ಸವಾಲಾಗಿ ಸ್ವೀಕರಿಸುತ್ತಾನೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಇದೊಂದು ದೊಡ್ಡ ಜವಾಬ್ದಾರಿ, ಇದೊಂದು ಯೋಗ, ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ, ನಡ್ಡಾ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾನೆ. ಕಾರ್ಯಕರ್ತರ ಶಕ್ತಿ ಸಂಘಟನೆ ಲೋಕಸಭೆ, ಜಿ.ಪಂ ತಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡ್ತಾನೆ. ವಿಜಯೇಂದ್ರ ಕೊಟ್ಟಿರುವ ಜವಾಬ್ದಾರಿ ಸವಾಲಾಗಿ ಸ್ವೀಕರಿಸ್ತಾನೆ ಯಶಸ್ವಿಯಾಗಿ ನಿರ್ವಹಣೆ ಮಾಡ್ತಾನೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಿಂದೆ ಕಟೀಲ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ಈಶ್ವರಪ್ಪ, ಅನಂತಕುಮಾರ್ ಬಿ.ಬಿ.ಶಿವಪ್ಪ ಅಂತಹವರು ಪಕ್ಷ ಸಂಘಟನೆ ಮಾಡಿದ್ದಾರೆ. ಇದೀಗ ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನಾಯಕರು. ರಾಜಕಾರಣ ಒಂದು ಸವಾಲು ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಅಧಿಕಾರ ಬಂದಾಗ ಸನಿಹಕ್ಕೆ ಬರೋದು ಸಹಜ. ಅದೇ ಅಧಿಕಾರ ಇಲ್ಲದಿದ್ದಾಗ ಹಿಂದೆ ಮುಂದೆ ನೋಡೋದು ಸಹಜ. ಹಿರಿಯರ ಜೊತೆ ಪಕ್ಷ ಸಂಘಟನೆ ಯಶಸ್ವಿಯಾಗಿ ಮಾಡುತ್ತಾನೆ. ಕೊಟ್ಟಿರುವ ಜವಾಬ್ದಾರಿಯನ್ನು ವಿಜಯೇಂದ್ರ ಸವಾಲಾಗಿ ಸ್ವೀಕರಿಸಿದ್ದಾನೆ ಎಂದರು.