ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳಿಂದ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಸಮಬಲ ಮಾಡಿಕೊಂಡಿತು. ಅಂದ ಹಾಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಬೌನ್ಸ್ ಪಿಚ್ಗಳನ್ನು ಆಡಲು ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಭಾರತದಲ್ಲಿ ಆಡುವಾಗ ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರೋಹಿತ್ ಶರ್ಮಾ, “ಇಂಥಾ ಪಿಚ್ಗಳಲ್ಲಿ ಆಡಲು ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಭಾರತದಲ್ಲಿ ಆಡುವಾಗ ಮಾತ್ರ ಎಲ್ಲರೂ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳಬೇಕು ಹಾಗೂ ಭಾರತದ ಪಿಚ್ಗಳ ವಿರುದ್ಧ ದೂರ ನೀಡಬಾರದು. ನೀವು ಇಲ್ಲಿಗೆ ಬರುವುದು ನಿಮಗೆ ನೀವು ಸವಾಲು ಹಾಕಿಕೊಳ್ಳಲು. ಅದರಂತೆ ಭಾರತಕ್ಕೆ ಬಂದಾಗ ಕೂಡ ನಿಮಗೆ ಸವಾಲು ಎದುರಾಗುತ್ತದೆ,” ಎಂದು ಹೇಳಿದ್ದಾರೆ.
ಮೊದಲ ಎಸೆತದಿಂದಲೇ ಚೆಂಡು ಬ್ಯಾಟ್ಗೆ ಎಡ್ಜ್ ಆಗುತ್ತಿತ್ತು. ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸಿ 6 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 55 ರನ್ಗಳಿಗೆ ಆಲ್ಔಟ್ ಮಾಡಿದ್ದರು. ನಂತರ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 153 ರನ್ಗಳಿಗೆ ಆಲ್ಔಟ್ ಆಗಿತ್ತು. ಕೇವಲ 11 ಎಸೆತಗಳಲ್ಲಿ ಭಾರತ ತಂಡ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 62ಕ್ಕೆ 3 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಒಟ್ಟಾರೆ ಮೊದಲನೇ ದಿನ 23 ವಿಕೆಟ್ಗಳು ಪತನವಾಗಿದ್ದವು.
ಪಂದ್ಯದ ಬಳಿಕ ಚಾರ್ಟ್ ರೆಫರಿಗಳು ಪಿಚ್ಗೆ ನೀಡುವ ರೇಟಿಂಗ್ ಅನ್ನು ತಿಳಿದುಕೊಳ್ಳಲು ನಾನು ಇಷ್ಟಪಡುತ್ತೇನೆ. ಭಾರತದಲ್ಲಿ ಮೊದಲನೇ ದಿನದಿಂದಲೇ ಪಿಚ್ ಸ್ಪಿನ್ಗೆ ನೆರವು ನೀಡುತ್ತದೆ. ಇದು ನಿಮಗೆ ಇಷ್ಟವಾಗುವುದಿಲ್ಲ. ಮೊದಲನೇ ದಿನದಿಂದಲೇ ಚೆಂಡು ಸೀಮ್ ಇದ್ದರೆ ನಿಮಗೆ ಇಷ್ಟವಾಗುತ್ತದೆ. ಇದು ಸರಿಯಲ್ಲ,” ಎಂದು ರೋಹಿತ್ ಶರ್ಮಾ ಪಿಚ್ ರೇಟಿಂಗ್ ಪ್ರಕ್ರಿಯೆ ಬಗ್ಗೆ ಟೀಕಿಸಿದರು.