ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಪಘಾತವಾಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನೋ ಕಮೆಂಟ್ಸ್ ಎಂದ ರಮೇಶ ಜಾರಕಿಹೊಳಿ, ಅದನ್ನು ಬಿಟ್ಟು ಬೇರೆ ವಿಷಯ ಕೇಳಿ ಎಂದರು. ರಾಜ್ಯದಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷವನ್ನು ನಾವು ಗಟ್ಟಿ ಮಾಡಿ, ಪೂರ್ಣ ಪ್ರಮಾಣದಲ್ಲಿ 130-140 ಸ್ಥಾನ ಗೆಲ್ಲಲು ಕೆಲಸ ಮಾಡುತ್ತಿದ್ದೇವೆ. 2028ಕ್ಕೆ ಆಗುತ್ತದೆಯೋ ಅಥವಾ ಅದಕ್ಕಿಂತ ಮೊದಲು ಚುನಾವಣೆ ಆಗುತ್ತದೆ ಅಂತಾ ಗೊತ್ತಿಲ್ಲ ಎಂದರು.
ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಜನರಲ್ಲಿ ಹೆಚ್ಚಾದ ಆತಂಕ!
ಸಿ.ಟಿ.ರವಿ ಪ್ರಕರಣದಲ್ಲಿ ಅವರು ಬಳಸಿರುವ ಶಬ್ದಕ್ಕೆ ನನ್ನ ತಕರಾರು ಇದೆ. ಅದಕ್ಕೆ ನನ್ನ ಸಹಮತ ಇಲ್ಲ. ಆದರೆ, ಅವರು ನಾನು ಆ ರೀತಿ ಮಾತಾಡಿಲ್ಲ ಎಂದಿದ್ದರು. ಹಿಂದೆ ಇಂದಿರಾ ಗಾಂಧಿ ಅವರ ಬಗ್ಗೆ ಸಿ.ಎಂ.ಇಬ್ರಾಹಿಂ ಏನು ಬೇಕಾದರೂ ಮಾತಾಡಿದ್ದರು. ರಾಜಕಾರಣದಲ್ಲಿ ಇಂಥ ವಿಚಾರಗಳನ್ನು ದೊಡ್ಡದು ಮಾಡಬಾರದಿತ್ತು. ರಾಜಕಾರಣದಲ್ಲಿ ಯಾರೂ ಶುದ್ಧರಲ್ಲ. ಬಾಯಿ ತಪ್ಪಿ ಆ ರೀತಿ ಮಾತಾಡಿರುತ್ತಾರೆ. ಅದನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ, ಅದನ್ನು ದೊಡ್ಡದು ಮಾಡಿ, ವಿಧಾನಸೌಧಕ್ಕೆ ಅಗೌರವ ತಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.