ಕನ್ನಡದ ನಟಿ ರಶ್ಮಿಕಾ ಮಂದಣ್ಣ, ರಣ್ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡ್ತಿದೆ. ಹೀಗಿರುವಾಗ ‘ಅನಿಮಲ್’ (Animal) ಟ್ರೈಲರ್ ನೋಡಿ ನಟ ಪ್ರಭಾಸ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
ಸಂಜು, ಬ್ರಹ್ಮಾಸ್ತ್ರ ಚಿತ್ರಗಳ ಬಳಿಕ ಹಿಂದೆಂದೂ ಕಾಣಿಸಿಕೊಂಡಿರದ ಲುಕ್ನಲ್ಲಿ ಮಾಸ್ ಆಗಿ ರಣ್ಬೀರ್ ಕಾಣಿಸಿಕೊಂಡಿದ್ದಾರೆ. ಅಪ್ಪ-ಮಗನ ಸಂಬಂಧದ ಕುರಿತು ಕಥೆಯಾಗಿದೆ. ಹಲವು ಶೇಡ್ಗಳಲ್ಲಿ ರಣ್ಬೀರ್ ಹೈಲೆಟ್ ಆಗಿದ್ದಾರೆ. ಬಾಬಿ ಡಿಯೋಲ್ ವಿಲನ್ ಆಗಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ನೋಡಿದ ಪ್ರೇಕ್ಷಕರು ಕೂಡ ಈ ಚಿತ್ರದ ಸೂಪರ್ ಹಿಟ್ ಆಗುತ್ತೆ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಅಂದಹಾಗೆ ರಣ್ಬೀರ್ಗೆ ನಾಯಕಿಯಾಗಿ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಮಲ್ ಟ್ರೈಲರ್ ಪ್ರಭಾಸ್ (Prabhas) ರಿಯಾಕ್ಟ್ ಮಾಡಿದ್ದಾರೆ.