ಟೀಕಾಕಾರರ ವಿರುದ್ಧ ಪಾಕ್ ನಾಯಕ ಬಾಬರ್ ಕಿಡಿಕಾರಿದ್ದಾರೆ. ತಮ್ಮ ತಂಡದ ಗೆಲುವಿನ ಅವಕಾಶ ಕ್ಷೀಣವಾಗಿದ್ದರೂ ಆ ಆಸೆಯನ್ನು ಬಿಟ್ಟುಕೊಡದ ಅವರು, ‘ಟಿ.ವಿ. ಚರ್ಚೆಯಲ್ಲಿ ಕುಳಿತು ಸಲಹೆ ಕೊಡುವುದು ಸುಲಭ’ ಎಂದು ಟೀಕಿಸಿದ್ದಾರೆ.
ನ್ಯೂಜಿಲೆಂಡ್ ತಂಡವನ್ನು ಹಿಂದೆ ಹಾಕಿ ರನ್ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಬೇಕಾದರೆ ಶನಿವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಕಡೇಪಕ್ಷ 287 ರನ್ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗುತ್ತದೆ. ಒಂದು ವೇಳೆ ಪಾಕ್ ಸೋತಲ್ಲಿ, ಮೂರು ವರ್ಷಗಳಿಂದ ನಾಯಕರಾಗಿರುವ ಬಾಬರ್ ಅವರು ಟೀಕಾಕಾರರಿಗೆ ಆಹಾರವಾಗಲಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
‘ವಿಶ್ವಕಪ್ನಲ್ಲಿ ನನ್ನ ಮೇಲಿಟ್ಟ ನಿರೀಕ್ಷೆಗೆ ತಕ್ಕಂತೆ ನಾನು ಆಡಿಲ್ಲ. ಹೀಗಾಗಿ ನಾನು ಒತ್ತಡದಲ್ಲಿದ್ದೇನೆಂದು ಹೇಳುತ್ತಾರೆ. ಆದರೆ ಹಾಗೇನೂ ಇಲ್ಲ’ ಎಂದು 29 ವರ್ಷದ ಬಾಬರ್ ಹೇಳಿದರು.
![](https://ainlivenews.com/wp-content/uploads/2024/01/Ad-Banner-copy-scaled.jpg)