ಬೆಂಗಳೂರು: ದಲಿತ ಸಿಎಂ ವಿಚಾರ ಅದು 2013 ರಿಂದಲೂ ಓಡುತ್ತಲೆ ಇದೆ. 5 ವರ್ಷ ಅದೆ ಓಡಿತು ಆದರೆ ಪಿಚ್ಚರ್ ರಿಲೀಸ್ ಆಗಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಖರ್ಗೆಯವರು ಇದ್ದರು ಆಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು ಅವರಿಗೆ ಡಿಸಿಎಂ ಆಗೋಕು ಆಗಲಿಲ್ಲ.ಎರಡುವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ ಇದಾರೆ, ಡಿಸಿಎಂ ಇದಾರೆ ಪಕ್ಷದ ಅಧ್ಯಕ್ಷರ ಇದ್ದಾರೆ ಹೈ ಕಮಾಂಡ್ ನಾಯಕರಿದ್ದರೆ ಅದೆಲ್ಲಾ ಅವರು ತೀರ್ಮಾನ ಮಾಡ್ತಾರೆ ಎಂದರು.
ಹಾಗೆ ಸಿಎಂ ಕರೆದ ಸಭೆಗೆ ನಾನು ಬಂದಿರಲಿಲ್ಲ.ಅನಾರೋಗ್ಯದ ಕಾರಣ ನಾನು ಬಂದಿರಲಿಲ್ಲ.ಅದನ್ನ ಸಿಎಂ ಗಮನಕ್ಕೆ ತಂದಿದ್ದೆ.ಬರಲಿಲ್ಲ ಅಂದ ಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ.ನಾನು ಇಲ್ಲದಿದ್ದರು ಅಲ್ಲಿನ ತೀರ್ಮಾನ ಎಲ್ಲರಿಗೂ ಅನ್ವಯವಾಗುತ್ತೆ.
ಯಾರು ಮಾತನಾಡಬಾರದು ಅನ್ನೋದು ಸರಿ ಇದೆ.ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತೆ ಎಂದು ಹೇಳಿ ಸುಮ್ಮನಾದರು.
ಮತ್ತೆ ಮಧ್ಯ ಪ್ರದೇಶದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಧಾನಿ ವಾಗ್ದಾಳಿ ವಿಚಾರ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ ಸಹಜ ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯವನ್ನ ಬಯ್ಯುವುದು. ಟೀಕೆ ಮಾಡುವುದು. ಅವರು ಆರೋಪ ಮಾಡ್ತಾರೆ.ಅವರು ಆರೋಪ ಮಾಡಿದ್ಸನ್ನ ಒಪ್ಪಬೇಕು ಅಂತಿಲ್ಲ ನಾವು ಅವರ ವಿರುದ್ದ 40% ಆರೋಪ, ಪೇ ಸಿಎಂ ಆರೋಪ ಮಾಡಿದ್ದೆವು ಅವರು ಒಪ್ಪಿಕೊಂಡ್ರಾ….? ಎಂದು ಹೇಳಿದರು.