ಬೆಂಗಳೂರು:- ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Rain News: ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆ!
ಗೃಹಲಕ್ಷ್ಮಿ ಹಣ 2 ತಿಂಗಳು ಯಾಕೆ ಬರಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮ್ಮ ಸಂಸ್ಥೆಗಳಲ್ಲಿ ನಿಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಈ ಪ್ರಶ್ನೆಗೆ ಮಾಧ್ಯಮಗಳು ಹೌದು ಮೇಡಂ ಸರಿಯಾಗಿ ಸಂಬಳ ಬರುತ್ತಿದೆ ಎಂದು ಉತ್ತರಿಸಿದ್ದಕ್ಕೆ ಸರ್ಕಾರಿ ಸಂಸ್ಥೆಗಳಲ್ಲಿ ಹಾಗಿಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ 1 ತಿಂಗಳಿಗೊಮ್ಮೆ, 2 ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ ಕೊಡುತ್ತಾರೆ. ಹಿಂದಿನಿಂದಲೂ ಹೀಗೆಯೇ ಇದೆ ಎಂದು ಉತ್ತರಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ 1 ತಿಂಗಳು ತಡವಾದರೆ 500 ಫೋನ್ ಕರೆಗಳು ಬರುತ್ತವೆ. ಅವರನ್ನು ಸಮಾಧಾನ ಮಾಡುವುದರಲ್ಲೇ ಸಮಯ ಹಿಡಿಯುತ್ತದೆ. ತಿಂಗಳು ಬಂದಿಲ್ಲ ಎಂದರೆ ಮುಂದಿನ ತಿಂಗಳು ಬರಲ್ಲ ಅಂತ ವಿಪಕ್ಷಗಳು ಹೇಳುತ್ತವೆ. ನಾವು ವಚನಭ್ರಷ್ಟರು ಅಲ್ಲ. ವಚನ ಪಾಲನೆ ಮಾಡುತ್ತೇವೆ ಎಂದು ಹೇಳುವ ಮೂಲಕ ಹಣ ವಿಳಂಬವಾಗಿ ಪಾವತಿಯಾಗುವುದಕ್ಕೆ ಸಮರ್ಥನೆ ನೀಡಿದ್ದಾರೆ.