ಬೆಂಗಳೂರು: ವಿಜಯೇಂದ್ರ ಬರ ಅಧ್ಯಯನ ವಿಚಾರ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ತಮಾಷೆಯೊ, ಸೀರಿಯಸ್ಸೋ ನನಗೆ ಗೊತ್ತಿಲ್ಲ ನಾವು ಕಳೆದ 3 ತಿಂಗಳಿಂದ ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೇನೆ ಮುಖ್ಯಮಂತ್ರಿಗಳು ಸುಮಾರು 10 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ ನಾನು, ಕೃಷ್ಣಬೈರೇಗೌಡರು 3-4 ಭಾರಿ ಹೋಗಿದ್ದೇವೆಎಂದು ಹೇಳಿದರು.
ಮೋದಿಯವರ ಭೇಟಿಗೆ ಅವಕಾಶ ಕೊಟ್ಟಾಗ ಎಲ್ಲಾ ಮಾಹಿತಿ ಕೊಟ್ಟು, ಮನವಿ ಮಾಡಿ ಬಂದಿದ್ದೀವಿ ಕೇಂದ್ರ ಸರ್ಕಾರದ ಅಧಿಕಾರಿಗಳು ಎಲ್ಲಾ ಪ್ರೊಸೆಸ್ ಮುಗಿಸಿ ವರದಿಯನ್ನು ಕೇಂದ್ರದ ಮಂತ್ರಿಗಳಿಗೆ ಕೊಟ್ಟಿದ್ದಾರೆ ಮಂತ್ರಿಗಳು ಅರ್ಧ ಗಂಟೆ ಮೀಟಿಂಗ್ ಮಾಡಿ ಬರ ಪರಿಹಾರವನ್ನು ಘೋಷಣೆ ಮಾಡಬೇಕು ಇದನ್ನ ಕೇಂದ್ರಕ್ಕೆ ಹೋಗಿ ಮಾಡಿಸೋದು ಬಿಟ್ಟು ಇಲ್ಲೇನು ಕೆಲಸ ಇರುತ್ತೆ ಇವರಿಗೆ ಕೇಂದ್ರದ ಟೀಂ ಬಂದು ರಿಪೋರ್ಟ್ ಕೊಟ್ಟಾಗಿದೆ, ಇವರು ಯಾರಿಗೆ ರಿಪೋರ್ಟ್ ಕೊಡ್ತಾರೆ
ಕೇಂದ್ರದಲ್ಲಿ ಮನವಿ ಮಾಡೋದು ಬಿಟ್ಟು ಇಲ್ಲಿ ಪ್ರವಾಸ ಮಾಡ್ತಿದ್ದಾರೆ ಒಂದಷ್ಟು ಪ್ರಚಾರಕ್ಕೆ ಹೋಗ್ತಿರಬಹುದು, ನಾವು ಬೇಡ ಅನ್ನೋಕಾಗುತ್ತಾ ಸಾಂತ್ವನ ಹೇಳೋಕೆ ಜನರ ಬಳಿ ಹೋಗ್ತೀವಿ ಅಂದ್ರೆ ನಮ್ಮದೇನು ಅಭ್ಯಂತರ ಇಲ್ಲ ಎಂದರು.
ಸರ್ಕಾರ ಪರಿಹಾರ ಕೊಡೋಕೆ ಆಗ್ತಿಲ್ಲ ಎಂಬ HDK ಆರೋಪ ವಿಚಾರಕ್ಕೆ ತಿರುಗೇಟು ಕೊಟ್ಟ ಸಇವ ಚಲುವರಾಯಸ್ವಾಮಿ, ಪಾಪ ಅವರಿಗೆ ಹೇಳ್ರಿ ನನ್ನತ್ರ ಸುಮ್ನೆ ಕೇಳಬಾರದು ಅವರತ್ರ ಕೇಳಬೇಕು ಅವರು ಸಿಎಂ ಆಗಿದ್ದಾಗ ಹಲವು ಕಂಡೀಷನ್ ಹಾಕಿ ಕೋಆಪರೇಟೀವ್ ಸಾಲ ಮನ್ನಾ ಮಾಡಿದ್ರು ಅದರಲ್ಲಿ 15 ಸಾವಿರ ಕೋಟಿ ಇನ್ನು ಭಾಕಿ ಇದೆ ಆ 15 ಸಾವಿರ ಕೋಟಿ ಯಾಕೆ ತೀರಿಸಿಲ್ಲ ಅಂತ ಕೇಳಿ ಮೊದಲು ಅವರಂಗೆ ಮಾತು ಕೊಡೋದೊಂದು ಮಾಡೋದೊಂದು ಮಾಡಲ್ಲ, ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧೆ ವದಂತಿ ವಿಚಾರ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಅದನ್ನು ನಮ್ಮ ಹೈಕಮಾಂಡ್, ಶಾಸಕರು ಕೂತು ತೀರ್ಮಾನ ಮಾಡ್ತಾರೆ ನಮ್ಮ ಮನೆಯಿಂದ ಅಥವಾ ನಾನು ಕ್ಯಾಂಡಿಡೇಟ್ ಇಲ್ಲ ಒಬ್ಬ ಸೂಕ್ತವಾದ ಕಾಂಗ್ರೆಸ್ ಕಾರ್ಯಕರ್ತ ಅಥವಾ ಮುಖಂಡನನ್ನ ಕಣಕಿಳಿಸ್ತೀವಿ ಸಚಿವರ ಸ್ಪರ್ಧೆಯ ಅನಿವಾರ್ಯತೆ ಇಲ್ಲ, ಪಕ್ಷ ಯಾರನ್ನೇ ಅರ್ಭರ್ಥಿ ಮಾಡಿದ್ರು ಗೆಲ್ಲಿಸಿಕೊಂಡು ಬರ್ತೀವಿ ನಮ್ಮ ಶ್ರೀಮತಿನು ಸ್ಪರ್ಧೆ ಮಾಡಲ್ಲ ಕುಟುಂಬದ ಯಾರೂ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು.