ಬೆಂಗಳೂರು: ಪ್ರತಾಪ್ ಸಿಂಹರನ್ನು ಟ್ರ್ಯಾಪ್ ಮಾಡಲಾಗ್ತಿದೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹಾರನ್ನ ಟ್ರ್ಯಾಪ್ ಹೇಗೆ ಮಾಡಲಾಗುತ್ತದೆ, ಯಾರ್ರೀ ಮಾಡ್ತಾರೆ? ಇನ್ನೂ ಏನೂ ಚಿಕ್ಕ ಹುಡುಗರಲ್ಲ, ನಾನೂ ಹುಡುಗರಲ್ಲ ನಮ್ಮ ನಮ್ಮ ಜವಾಬ್ದಾರಿ ಇರುತ್ತದೆ ಎಂದು ಪ್ರತಾಪ್ ಸಿಂಹಾ ವಿರುದ್ಧ ಕಿಡಿ ಕಾರಿದ್ದಾರೆ.
ಹಾಗೆ ದೆಹಲಿ ಪ್ರವಾಸ ವಿಚಾರ ಮಾತನಾಡಿದ ಅವರು, ಹೈಕಮಾಂಡ್ ನಾಯಕರೇ ಅವರೇನೂ ಕರೆದಿಲ್ಲ, ನಾವೇ ಹೋಗ್ತಾ ಇದ್ದೇವೆ ನಾವೆಲ್ಲ ನಿಗಮ ಮಂಡಳಿ ಲಿಸ್ಟ್ ಕೊಟ್ಟಿದ್ದೇವೆ ಅದಕ್ಕೆ ಅಂಕಿತ ಬೇಕು ತಾಲೂಕು ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಕಾರ್ಯಕ್ರಮ ಮಾಡಬೇಕು ಇನ್ನು 15 ದಿನಗಳ ಒಳಗೆ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದರು.
ಹಾಗೆ ನಾರಾಯಣಗೌಡ ಬಂದು ಭೇಟಿಯಾಗಿದ್ದರು ಕನ್ನಡದ ಬೋರ್ಡ್ ಹಾಕಿ ಅಂದಿದ್ದಕ್ಕೆ ಇವರ ಮೇಲೆ ಕೇಸ್ ಹಾಕಿದ್ದಾರೆ ಯಾರೋ ದುರ್ನಡತೆಯಿಂದ ನಡೆದುಕೊಂಡಿದ್ದಾರೆ ಅಂತ ಬಂದಿದ್ದರು ಅದರ ಬಗ್ಗೆ ಕಮಿಷನರ್ ಹತ್ರ ಮಾತಾಡಿದ್ದೇನೆ ಕನ್ನಡಿಗ ಹೋರಾಟಗಾರರ ಮೇಲೆ ಕೇಸ್ ಹಾಕಬಾರದು ಎಂದು ಹೇಳಿದರು.
ಕನಕಪುರದಲ್ಲಿ ಆನೆ ದಾಳಿ ಆಗಿದೆ ಪರಿಹಾರ ನೀಡುವ ಬಗ್ಗೆ ಸೂಚನೆ ನೀಡಿದ್ದೇನೆ ನಮ್ಮ ನಾಯಕರೆಲ್ಲ ಅಲ್ಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.