ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಗಬಹುದು,ಯಾವ ಗಳಿಗೆಯಲ್ಲಿ ಆಗಬಹುದು ಇನ್ನ ಮುಂದಕ್ಕೆ ಹೋಗುವ ಸಾಧ್ಯತೆಯಿಲ್ಲ ಆಗಬಹುದು,ಆಗುತ್ತದೆ ಇಲ್ಲವಾದರೆ ಸಂಜೆ ನಿಮ್ಮ ಜೊತೆ ಮಾತನಾಡ್ತೇನೆ ಎಂದರು.
ಹಾಗೆ ಇದೇ ತಿಂಗಳ 21 ರಂದು ಕಾರ್ಯಕರ್ತರ ಸಮಾವೇಶ ನಡೆಯಲಿದೆ ಮಂಗಳೂರಿನಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಲೋಕಸಭೆ ಚುನಾವಣೆ ಸಂಬಂದಿಸಿದಂತೆ ಸಭೆ ಜನವರಿ 19 ರಂದು ಎಲೆಕ್ಷನ್ ಕಮಿಟಿ ಮೀಟಿಂಗ್ ಇದೆ ಅಂದು ಸಂಜೆ ಸಭೆ ನಡೆಯಲಿದೆ ಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅವರ ಮುಖಂಡರೇ ಹೆಲ್ತ್ ಬಗ್ಗೆ ಅಂತ ಹೇಳ್ತಿದ್ದಾರೆ ಅವರ ಹೆಲ್ತ್ ಬಗ್ಗೆ ಅವರು ಗಮನ ಕೊಡಲಿ ಅವರ ಮುಖಂಡರೇ ಹೇಳ್ತಿರೋದು ಸಂತೋಷ ಎಂದು ಹೇಳಿದರು.