ದಕ್ಷಿಣದ ಖ್ಯಾತನಟಿ ಸಮಂತಾ (Samantha) ಮದುವೆ ಕುರಿತಾಗಿ ಸಾಕಷ್ಟು ಸುದ್ದಿಗಳು ಚಿತ್ರೋದ್ಯಮದಲ್ಲಿ ಗಿರಕಿ ಹೊಡೆದಿವೆ. ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಅಂತೆಲ್ಲ ಸದ್ದು ಮಾಡಿವೆ. ಡಿವೋರ್ಸ್ (Divorce) ನಂತರ ಸಮಂತಾ ಮದುವೆ (Marriage) ಯೋಚನೆಯನ್ನು ಮಾಡಿದ್ದಾರೆ ಎಂದೂ ಸುದ್ದಿ ಆಗಿದೆ. ಈ ಕುರಿತು ಸಮಂತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. 2ನೇ ಮದುವೆ ಕುರಿತಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಡಿವೋರ್ಸ್ ನಂತರ ಯಾವುದೇ ಕಾರಣಕ್ಕೂ ಅವರು ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ. ಎರಡನೇ ಮದುವೆ ಆಗೋದು ತಮ್ಮ ಪ್ರಕಾರ ವೇಸ್ಟ್ ಅಂತೆ. ಆ ಮದುವೆಯೂ ಮುರಿದು ಬೀಳೋಲ್ಲ ಅನ್ನೋದು ಏನು ಗ್ಯಾರಂಟಿ ಎನ್ನುವ ಸಮಂತಾ. ತಮಗೆ ಎರಡನೇ ಮದುವೆಯಲ್ಲೇ ಆಸಕ್ತಿ ಇಲ್ಲವೆಂದು ಹೇಳಿಕೊಂಡಿದ್ದಾರೆ.
ಅಭಿಮಾನಿಗಳು ಮತ್ತು ಮಾಧ್ಯಮದವರು ಪದೇ ಪದೇ 2ನೇ ಮದುವೆ ಕುರಿತಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಇಬ್ಬರಿಗೂ ಒಂದೇ ಮಾತಿನ ಮೂಲಕ ಉತ್ತರ ನೀಡಿದ್ದಾರೆ. ತಮಗೆ ಮದುವೆ ಕುರಿತಾಗಿ ಯಾವುದೇ ಆಸಕ್ತಿ ಉಳಿದಿಲ್ಲವೆಂದು ಅವರು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.