ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ.
ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.
ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್ಸ್ಕ್ರೀನ್ ಬಳಕೆಯನ್ನು ಮಾಡುತ್ತಾರೆ. ಆದರೂ ತುಟಿಯ ಚರ್ಮ ಒಣಗುತ್ತದೆ.
ಒಣಗಿದ ತುಟಿಗೆ ಕಾರಣಗಳೇನು?
* ನೀರಿನ ಕೊರತೆ : ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ
ಒಡೆಯುತ್ತದೆ. ರಕ್ತದ ಕೊರತೆ ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ತುಟಿ ಒಣಗುವುದರಿಂದ ಆರೋಗ್ಯದಲ್ಲಿನ ಏರುಪೇರುಗಳು ಕಾಣಿಸಿಕೊಳ್ಳುತ್ತದೆ. ನೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ತುಟಿ ಒಣಗುವುದರಿಂದ ಗುರುತಿಸಬಹುದಾಗಿದೆ. ಆದಷ್ಟು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಅತಿಯಾದ ಧೂಮಪಾನ: ತುಟಿಗಳು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಗಾಢವಾದ ಬಣ್ಣಕ್ಕೆ ತಿರುಗಬಹುದು. ಧೂಮಪಾನ, ಯಕೃತ್ತಿನಂತಹ ಸಮಸ್ಯೆ ಉಂಟಾದರೆ ತುಟಿಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ. ಇದ್ದಕ್ಕಿದ್ದಂತೆ ತುಟಿಯ ಬಣ್ಣ ಗಾಢ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.
ಸೌಂದರ್ಯ ವರ್ಧಕಗಳ ಬಳಕೆ: ತುಟಿಗೆ ಲೇಪಿಸುವ ಬಣ್ಣ, ಲಿಪ್ ಬಾಮ್, ಔಷಧಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೂ ಉಂಟಾಗಬಹುದು. ಇಂತಹ ಅಲರ್ಜಿ ಮಾರಣಾಂತಿಕ ಕಾಯಿಲೆಯೂ ಆಗುವ ಸಾಧ್ಯತೆಗಳಿರುತ್ತವೆ. ಟೂತ್ ಪೇಸ್ಟ್ ಅಲರ್ಜಿಯಿಂದಲೂ ಸಹ ತುಟಿಯಲ್ಲಿ ಅಲರ್ಜಿ ಉಂಟಾಗಬಹುದು. ಆದ್ದರಿಂದ ಬಹುಬೇಗ ವೈದ್ಯರ ಸಲಹೆ ಪಡೆದ ನಿಮ್ಮ ಚರ್ಮಕ್ಕೆ ಅನುಗುಣವಾದ ಕ್ರೀಮ್ ಬಳಸುವುದು ಉತ್ತಮ.
ಕಬ್ಬಿಣಾಂಶದ ಕೊರತೆ: ತುಟಿಯ ಸಂದುಗಳಲ್ಲಿ ಸೀಳುವಿಕೆ ಮುಖ್ಯ ಕಾರಣ ಕಬ್ಬಿಣಾಂಶದ ಕೊರತೆ. ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶದ ಕೊರತೆ ಹೆಚ್ಚಾದಾಗ ಇಂತಹ ಸಮಸ್ಯೆಗಳು ಉಂಟಾಗುತ್ತದೆ.
ತುಟಿಯ ಆರೈಕೆ ಹೀಗಿರಲಿ:
* ಬೆಳಗ್ಗೆ ಹಲ್ಲು ಉಜ್ಜಿದ ಬಳಿಕ ತುಟಿಗಳನ್ನು ಬ್ರಶ್ ನಿಂದ ಮೃದುವಾಗಿ ಉಜ್ಜಬೇಕು.
* ವಾರಕ್ಕೊಮ್ಮೆ ತುಟಿಗೆ ನೈಸರ್ಗಿಕವಾಗಿ ತಯಾರಿಸಿದ ಸ್ಕ್ರಬ್ ಲೇಪಿಸಿಕೊಳ್ಳಬೇಕು.
* ತುಟಿಗೆ ನಿಮ್ಮ ಆರೋಗ್ಯಕ್ಕೆ ಅನುಗುಣವಾದ ಲಿಪ್ ಬಾಮ್ ಬಳಸಿ. (ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ)
* ವಿಟಮಿನ್ ಎ ಹೇರಳವಾಗಿರುವ ಕ್ಯಾರೆಟ್, ಟೊಮೆಟೋ, ಹಸಿತರಕಾರಿ ಆಹಾರ ಮತ್ತು ಪ್ರತಿನಿತ್ಯ ದೇಹಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇವಿಸಬೇಕು.