ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಾಗಿನಿಂದ ಮುಡಾ ಹಗರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮೈಸೂರು ಲೋಕಾಯುಕ್ತದ ಮುಂದೆ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯಕ್ತ ಡಿಬಿ ನಟೇಶ್ ಹಾಜರಾದರು.
Smartphone CCTV Camera: ಹಳೆ ಫೋನ್ ಬಳಸಿ, ಸಿಸಿಟಿವಿ ತಯಾರಿಸಿ! ಹೇಗೆ ಗೊತ್ತೆ..? ಇಲ್ಲಿದೆ ಟಿಕ್ಸ್
ಆದರೆ ಕಚೇರಿಯೊಳಗೆ ಹೋಗುವ ಮೊದಲು ಅವರು ತಮ್ಮ ವಿಶುಯಲ್ಸ್ ಸೆರೆಹಿಡಿಯುತ್ತಿದ್ದ ಮಾಧ್ಯಮ ಕೆಮೆರಾಮನ್ ಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ನನ್ನ ವಿಡಿಯೋ ಯಾಕೆ ಮಾಡ್ತಾ ಇದ್ದೀರಿ? ನಾನೇನು ಡ್ಯಾನ್ಸ್ ಮಾಡ್ತಿದ್ದೀನಾ? ನಿಮಗೆ ಕನಿಷ್ಠ ಕಾಮನ್ ಸೆನ್ಸ್ ಕೂಡ ಇಲ್ವಾ ಎಂದು ಕಿಡಿಕಾರಿದ್ದಾರೆ.
ನಟೇಶ್ ಮೇಲಿರುವ ಆರೋಪ ಏನು?
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟ್ಗಳು ನಟೇಶ್ ಅವಧಿಯಲ್ಲಿ ಮಂಜೂರು ಆಗಿತ್ತು. ಸಭೆ ಮಾಡಿದ್ದು, ಸೈಟ್ ಹಂಚಿದ್ದು, ಖಾತೆ ಮಾಡಿಸಿದ್ದು ಎಲ್ಲವೂ ನಟೇಶ್ ಅವಧಿಯಲ್ಲೇ ಆಗಿತ್ತು. ಸೈಟ್ ಹಂಚಿಕೆಯ ವೇಳೆ ಸಿದ್ದರಾಮಯ್ಯ ಅವರ ಪ್ರಭಾವ ತನ್ನ ಮೇಲೆ ಇತ್ತಾ ಎಂಬ ಆರೋಪದ ಸಾಬೀತಿಗೆ ನಟೇಶ್ ಹೇಳಿಕೆ ಬಹಳ ಮಹತ್ವ ಪಡೆದಿದೆ.