ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ.
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.77 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.95 ರೂ. ಅದೇ ಸಮಯದಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 100.80 ರೂ. ಇದೆ.
ಅತಿಯಾಗಿ ಹಾಲು ಕುಡಿಯುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತವೆಯೇ..? ಈ ಸ್ಟೋರಿ ನೋಡಿ
ಇಂದು ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಬೆಲೆ 87.67 ರೂ. ಆದರೆ, ಮುಂಬೈನಲ್ಲಿ ಡೀಸೆಲ್ ಬೆಲೆ 89.97 ರೂ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 91.76 ರೂ ಮತ್ತು ಚೆನ್ನೈನಲ್ಲಿ ಡೀಸೆಲ್ ಬೆಲೆ ಲೀಟರ್ಗೆ 92.39 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ. ಇದೆ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯನ್ನು ಆಧರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಪರಿಶೀಲಿಸಿದ ನಂತರ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.