ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಭಾರತದ ಬಹಳಷ್ಟು ಭಾಗಗಳಲ್ಲಿ ನವರಾತ್ರಿಯಂದು ಉಪವಾಸ ಮಾಡುವ ಪದ್ಧತಿ ಇದೆ. ಉಪವಾಸ ಆಚರಣೆ ಮಾಡುವುದರಿಂದ ಭಕ್ತರ ಮನಸ್ಸು, ದೇಹ ಹಾಗೂ ಆತ್ಮವು ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಿ ಶಕ್ತಿ ಸ್ವರೂಪಿಣಿಯ ಕೃಪೆಗೆ ಪಾತ್ರರಾಗುತ್ತಾರೆ.
*ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಭಕ್ತರು ಮಾತೆ ದುರ್ಗೆಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇದರಿಂದಾಗಿ ಭಕ್ತರ ಬದುಕಿನಲ್ಲಿ ಯಶಸ್ಸು ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ.
* ವೈಯಕ್ತಿಕ ಆಸೆಗಳನ್ನು ತ್ಯಾಗ ಮಾಡುವುದೂ ಸಹ ಭಕ್ತಿಯ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ದುರ್ಗೆಯನ್ನು ಒಲಿಸಿಕೊಳ್ಳಲು ಕೆಲವರು ಉಪವಾಸ ವ್ರತಾಚರಣೆ ಮಾಡುತ್ತಾರೆ.
* ನವರಾತ್ರಿಯ ದಿನ ಕೈಗೊಳ್ಳಬೇಕಾದ ಉಪವಾಸದ ಕ್ರಮಗಳನ್ನು ಮಾತೆ ದುರ್ಗೆಯೇ ಭಕ್ತರಿಗೆ ಉಪದೇಶಿಸಿದ್ದಾಳೆ ಎಂದು ನಂಬಲಾಗಿದೆ.
ವಿಜಯದಶಮಿಯ ಹಿನ್ನೆಲೆ ಏನು ಗೊತ್ತಾ!? ರಾಮಾಯಣ- ಮಹಾಭಾರತಕ್ಕೆ ಏನು ಸಂಬಂಧ? ನೀವು ತಿಳಿಯಲೇಬೇಕಾದ ವಿಚಾರ!
* ಋತುಮಾನವು ಬದಲಾಗುತ್ತಿದ್ದಂತೆಯೇ ನವರಾತ್ರಿ ಬರುತ್ತದೆ. ಋತುಮಾನ ಬದಲಾದಂತೆ ಮನುಷ್ಯನ ದೈಹಿಕ, ಮಾನಸಿಕ, ಆಧ್ಯಾತ್ಮಿಕತೆಯ ಮೇಲೆ ಆಗುವ ಪರಿಣಾಮಗಳೂ ಬದಲಾಗುತ್ತಾ ಹೋಗುತ್ತವೆ. ನವರಾತ್ರಿಯಲ್ಲಿ ಉಪವಾಸ ಕೈಗೊಳ್ಳುವುದರಿಂದ ನೀವು ಶಕ್ತಿ ಹಾಗೂ ಸಮಯದ ನಡುವೆ ಸಮತೋಲನ ಕಾಪಾಡಿಕೊಳ್ಳಬಹುದು. ಉಪವಾಸವು ತಾಯಿ ದುರ್ಗೆಯನ್ನು ಒಲಿಸಿಕೊಳ್ಳುವ ಒಂದು ಮಾರ್ಗವಾಗಿದೆ.
*ನವರಾತ್ರಿಯು ನಿಮ್ಮ ದೇಹ ಹಾಗೂ ಮನಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನವರಾತ್ರಿಯ ಸಮಯದಲ್ಲಿ ಉಪವಾಸ ಕೈಗೊಳ್ಳುವುದು ಒಂದು ದೊಡ್ಡ ಜವಾಬ್ದಾರಿ
ಉಪವಾಸವನ್ನು ಯಾರೆಂದರೆ ಅವರು ಕೈಗೊಳ್ಳುವುದು ಅಪಾಯಕಾರಿ. ನಿಮ್ಮ ದೇಹದ ಮೇಲೆ ಅದು ವ್ಯತಿರಿಕ್ತ ಪರಿಣಾಮವನ್ನೂ ಬೀರುವ ಸಾಧ್ಯತೆ ಇದೆ. ಹಾಗಾಗಿ ವ್ರತ ಕೈಗೊಳ್ಳುವ ಮುನ್ನ ಈ ಕೆಳಗೆ ಹೇಳಲಾಗಿರುವ ನಿಯಮಗಳನ್ನು ಅನುಸಿರಿಸಿದರೆ ಒಳ್ಳೆಯದು.
* ಪ್ರಾಯಕ್ಕೆ ಬಾರದ ಮಕ್ಕಳು, ಹಿರಿಯರು, ಕಂದಮ್ಮಗಳು, ಹಾಲುಣಿಸುವ ಬಾಣಂತಿಯರು, ಗರ್ಭಿಣಿಯರು ಉಪವಾಸ ಕೈಗೊಳ್ಳುವುದು ಬೇಡ. ಏಕೆಂದರೆ ನಿರಶನ ಮಾಡಿದರೆ ಅದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
* ಉಪವಾಸ ವ್ರತ ಇರುವ ದಿನ ಮಾಂಸ, ಮೀನು, ಮೊಟ್ಟ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಉಪ್ಪು ಸೇವಿಸಬಾರದು.
* ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಒಳ್ಳೆಯದು.
* ಉಪವಾಸ ಇರುವ ದಿನ ದ್ರವಾಹಾರವನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
* ಉಪವಾಸ ವ್ರತ ಕೈಗೊಳ್ಳುವ ಭಕ್ತರು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಬೇಕು.
* ನವರಾತ್ರಿಯಂದು ಉಪವಾಸ ಕೈಗೊಳ್ಳುವ ಭಕ್ತರು ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಪೂಜೆ ಮಾಡಬೇಕು.
* ಉಪವಾಸ ಆಚರಿಸುವ ದಿನದಂದು ಕಪ್ಪು ಬಟ್ಟೆ ಧರಿಸುವುದು ಶುಭಕರವಲ್ಲ.
* ನವರಾತ್ರಿಯ ಉಪವಾಸ ವ್ರತದ ದಿನದಂದು ಹೇರ್ ಕಟ್ ಮಾಡಿಸುವುದಾಗಲಿ, ಉಗುರು ಕತ್ತರಿಸುವುದಾಗಲೀ, ಶೇವ್ ಮಾಡುವುದಾಗಲೀ ಮಾಡಬಾರದು.
ನವರಾತ್ರಿಯ ಒಂಭತ್ತೂ ದಿನಗಳ ಕಾಲ ಉಪವಾಸ ಮಾಡುವುದು ಅಸಾಧ್ಯ, ಮಹಿಳೆಯರಾಗಲೀ ಪುರುಷರಾಗಲಿ ಆ ಒಂಭತ್ತು ದಿನಗಳಲ್ಲಿ ನಿಮಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಉಪವಾಸ ಮಾಡಿ.
* ಉಪವಾಸ ವ್ರತ ಕೈಗೊಳ್ಳುವ ಭಕ್ತರು ಮೂರು ಹೊತ್ತಿನಲ್ಲಿ ಒಂದು ಹೊತ್ತು ಸಾತ್ವಿಕ ಆಹಾರವನ್ನು ಸೇವಿಸಬಹುದು.
* ಹಣ್ಣು, ಹಾಲು, ಮನೆಯಲ್ಲಿ ಮಾಡಿದ ಜ್ಯೂಸ್, ಪಾಯಸವನ್ನು ಬೆಳಗಿನ ಸಮಯದಲ್ಲಿ ಸೇವಿಸಬಹುದು.
* ಬೆಳಗಿನಿಂದ ಏನೂ ತಿನ್ನದಿದ್ದರೆ ಸೂರ್ಯಾಸ್ತದ ವೇಳೆ ಒಪ್ಪೊತ್ತು ಸಾತ್ವಿಕ ಆಹಾರ ಸೇವಿಸಬಹುದು.