ಬ್ರೆಜಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ವೇದಮಂತ್ರಗಳ ಸ್ವಾಗತ ಕೋರಲಾಗಿದೆ. ನೈಜೀರಿಯಾ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಗೆ ಭೇಟಿ ತೆರಳಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್ನ ರಿಯೊ ಡಿ ಜನೈರೊಗೆ ಬಂದಿಳಿದಿರುವ ಅವರನ್ನು ಬ್ರೆಜಿಲ್ನಲ್ಲಿರುವ ಭಾರತೀಯ ರಾಯಭಾರಿ ಸುರೇಶ್ ರೆಡ್ಡಿ ಸೇರಿದಂತೆ ಭಾರತೀಯ ಅಧಿಕಾರಿಗಳು ಬರಮಾಡಿಕೊಂಡರು.
ಈ ವೇಳೆ ಪ್ರಧಾನಿ ಮೋದಿ ಅವರಿಗೆ ಸಂಸ್ಕೃತದ ವೇದ ಮಂತ್ರಗಳ ಘೋಷಣೆ ಮೂಲಕ ಸ್ವಾಗತ ಕೋರಲಾಯಿತು. ಇದಲ್ಲದೇ ಹೋಟೆಲ್ನಲ್ಲಿ ದಾಂಡಿಯಾ ನೃತ್ಯ ಪ್ರದರ್ಶಿಸಲಾಯಿತು. ಸಾಂಪ್ರದಾಯಿಕ ಗುಜರಾತಿ ಉಡುಪಿನಲ್ಲಿ ನೃತ್ಯಗಾರರು ಅತ್ಯುತ್ಸಾಹದಿಂದ ಮೋದಿಯವರನ್ನು ಬರಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ವೇದ ಮಂತ್ರಗಳನ್ನು ಪಠಿಸಿದ್ದು ವಿಶೇಷವಾಗಿತ್ತು. ಡಯಾಸ್ಪೊರಾ ಪ್ರಧಾನಿ ಮೋದಿಗೆ ಉಡುಗೊರೆಗಳನ್ನು ನೀಡಿದರು. ತಮ್ಮ ಪ್ರವಾಸದ ಅಂತಿಮ ಹಂತದಲ್ಲಿ ಮೋದಿ ನ.19 ರಿಂದ 21 ರವರೆಗೆ ಗಯಾನಾಗೆ ಭೇಟಿ ನೀಡಲಿದ್ದಾರೆ. 50 ವರ್ಷಗಳ ನಂತರ ಗಯಾನಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿರಲಿದೆ.