ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು.
ಈ ರಾಶಿಯವರಿಗೆ ಅದೃಷ್ಟ ಮತ್ತು ಸಂಪತ್ತು ಒಂದೇ ಮುಖದ ನಾಣ್ಯ ಇದ್ದಂತೆ: ಸೋಮವಾರದ ರಾಶಿ ಭವಿಷ್ಯ 03 ಮಾರ್ಚ್ 2025!
ಪ್ರಪಂಚದಾದ್ಯಂತ ಅನೇಕ ಮಂದಿ ಬೊಜ್ಜು ಮತ್ತು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಅಧಿಕ ತೂಕ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ತೂಕ ಇಳಿಸಿಕೊಳ್ಳಲು ಅನೇಕ ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.
ಬೊಜ್ಜು ದೇಹಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಪ್ರಪಂಚದಾದ್ಯಂತದ ವಿಜ್ಞಾನಿಗಳು ವಿವಿಧ ಸಂಶೋಧನೆಗಳ ಮೂಲಕ ವಿವರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನೀವು ಅಧಿಕ ತೂಕ ಅಥವಾ ಬೊಜ್ಜನ್ನು ಹೊಂದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
ಮುಖ್ಯವಾಗಿ ಕೊಲೆಸ್ಟ್ರಾಲ್ ಹೃದ್ರೋಗ, ಟೈಪ್ 2 ಮಧುಮೇಹ, ಅಸ್ಥಿಸಂಧಿವಾತ ಮತ್ತು ಕೆಲವು ರೀತಿಯ ಕ್ಯಾನ್ಸರ್ (ಎಂಡೊಮೆಟ್ರಿಯಲ್, ಸ್ತನ, ಕೊಲೊನ್) ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಈ ರೋಗಗಳು ಅಕಾಲಿಕ ಮರಣ ಮತ್ತು ಗಮನಾರ್ಹ ಅಂಗವೈಕಲ್ಯಕ್ಕೆ ಕಾರಣವಾಗಬಹುದು.
ಹೀಗಾಗಿ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಅಧಿಕ ತೂಕ ಅಥವಾ ಬೊಜ್ಜನ್ನು ಹೊಂದಿದ್ದರೆ, ಸಾಧ್ಯವಾದಷ್ಟು ಬೇಗ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ. ನೀವು ಮನೆಮದ್ದುಗಳ ಮೇಲೆ ನಂಬಿಕೆ ಇದ್ದರೆ, ನಾವಿಂದು ತಿಳಿಸುವ ಈ ಪದಾರ್ಥಗಳನ್ನು ಬಳಸುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಹಾಗಾದ್ರೆ ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಆಯುರ್ವೇದ ವೈದ್ಯರ ಪ್ರಕಾರ, ಜೇನುತುಪ್ಪವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಇದು ಉತ್ತಮ ಕೊಲೆಸ್ಟ್ರಾಲ್ ಬರ್ನಿಂಗ್ ಸಾಧನವಾಗಿದೆ. ಇದನ್ನು ಸೇವಿಸಲು ಉತ್ತಮ ಮಾರ್ಗವೆಂದರೆ (ಬೊಜ್ಜುತನಕ್ಕಾಗಿ) ಒಂದು ಲೋಟ ನೀರಿಗೆ 1 ಟೀ ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡುವುದು. ಇದಕ್ಕಾಗಿ, ಬೆಚ್ಚಗಿನ ನೀರನ್ನು ಮಾತ್ರ ಬಳಸಬೇಕು. ಇದರೊಂದಿಗೆ, ಜೇನುತುಪ್ಪವನ್ನು ಎಂದಿಗೂ ಬಿಸಿ ಆಹಾರ ಅಥವಾ ನೀರಿನೊಂದಿಗೆ ಬೆರೆಸಬಾರದು ಮತ್ತು ಬಿಸಿ ವಾತಾವರಣದಲ್ಲಿ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ನಿಂಬೆಹಣ್ಣು: ನಿಂಬೆಹಣ್ಣು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಅಲ್ಲದೇ ನಿಂಬೆ ತೂಕ ಇಳಿಕೆಗೂ ಸಹಾಯಕವಾಗಿದೆ ಎಂದು ಹಲವಾರು ಅಧ್ಯಯನಗಳು ತಿಳಿಸಿದೆ. ಇದಕ್ಕಾಗಿ ನೀವು ಬೆಳಗ್ಗೆ ಒಂದು ಲೋಟ ನೀರು ಕುಡಿಯಬಹುದು.
ಅರಿಶಿನ: ಭಾರತೀಯ ಅಡುಗೆಮನೆಯಲ್ಲಿ ಅರಿಶಿನ ಅತ್ಯಗತ್ಯವಾದ ಪದಾರ್ಥವಾಗಿದೆ. ಇದರಲ್ಲಿ ಆರೋಗ್ಯಕ್ಕೆ ಉತ್ತಮವಾದ ಹಲವು ಪೋಷಕಾಂಶಗಳಿವೆ. ಇದರಲ್ಲಿ ಕರ್ಕ್ಯುಮಿನ್ ಕೂಡ ಇದೆ. ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ.
ಅರಿಶಿನವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಅರಿಶಿನ ನೀರನ್ನು ಕುಡಿಯುವುದರಿಂದಲೂ ನೀವು ಬೇಗ ತೂಕ ಇಳಿಸಿಕೊಳ್ಳಬಹುದು