ಕಾಗವಾಡ:- ಪೋಲಿಸ್ ಠಾಣೆಯ ವತಿಯಿಂದ ಪಿಎಸ್ಐ ಎಂ.ಬಿ. ಬಿರಾದರ ಇವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ.ಬಿ. ಬಿರಾದರ ಇವರ ನೇತೃತ್ವದಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಯವರು ಠಾಣೆಯಿಂದ ಹೊರಟು, ಚೆನ್ನಮ್ಮಾ ಸರ್ಕಲ್, ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ವಾಹನದೊಂದಿಗೆ ಸಿಬ್ಬಂದಿಯವರು ಬೈಕ್ ಮೇಲೆ ಹೆಲ್ಮೆಟ್ ಧರಿಸುವ ಮೂಲಕ ರ್ಯಾಲಿ ನಡೆಸಿದರು.
ಜನದಟ್ಟಣೆ ಇರುವ ಜಾಗದಲ್ಲಿ ಬೈಕ್ ನಿಲ್ಲಿಸಿ, ಮಾತನಾಡಿದ ಪಿಎಸ್ಐ ಎಂ.ಬಿ. ಬಿರಾದರ ಅವರು ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕಬ್ಬಿನ ಹಂಗಾಮು ಪ್ರಾರಂಭವಾಗಿದ್ದರಿAದ ರಸ್ತೆ ಮೇಲೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ತಮ್ಮ ಸುರಕ್ಷತೆ ದೃಷ್ಟಿಯಿಂದ ಇಲಾಖೆ ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತ ಪ್ರಯಾಣ ಮಾಡಬೇಕು. ಹೆಲ್ಮೆಟ್ ನಮ್ಮ ತಲೆಗೆ ಭಾರ ಅಲ.್ಲ ಅದು ನಮ್ಮ ಜೀವದ ರಕ್ಷಕನಾಗಿ ಕೆಲಸ ಮಾಡುವುದು ಎಂದು ವಾಹನ ಸವಾರರಿಗೆ ತಿಳಿ ಹೇಳಿದರು.
ಈ ರ್ಯಾಲಿಯಲ್ಲಿ ಪಿಎಸ್ಐ ಮಲಕನಗೌಡ ಬಿರಾದರ, ಎಎಸ್ಐಗಳಾದ ಬಿ.ಎಮ್, ರಿಜಕನವರ, ಜೆ.ಎ. ಸೋನಾವನೆ, ಪೋಲಿಸ್ ಸಿಬ್ಬಂದಿಗಳಾದ ವೈ.ವೈ. ಭೋಜ, ಆರ್.ಎ. ಕಮತೆ, ಆರ್.ಎಮ್. ನಿಜಗುಣಿ, ಆರ್.ಎಸ್. ಬಸ್ತವಾಡ, ವ್ಹಿ.ಎಮ್. ನರಗಟ್ಟಿ, ವೈ.ಎಸ್. ಲಾಳಿ, ಎ.ವ್ಹಿ. ಬಾಳಿಗೇರಿ, ಎಸ್.ಡಿ. ದೇವರೂಷಿ, ಕುಮಾರಿ ಎಸ್.ಎಸ್. ಮಿರ್ಜಿ, ಬಿ.ಎಸ್. ಪಾಟೀಲ, ಎ.ಎಸ್. ಹಡಪದ, ಎಸ್.ಎಸ್. ಕಾಂಬಳೆ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.