ಬೆಂಗಳೂರು: ಹಿಜಬ್ (Hijab) ವಿಚಾರದಲ್ಲಿ ಕಾನೂನು ಪರಿಶೀಲಿಸಿಯೇ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ.
ಹಾಗಾಗಿ ಎಲ್ಲರಿಗೂ ಈಗ ಗೊತ್ತಾಗಿದೆ. ಪ್ರತಿಯೊಬ್ಬ ಪ್ರಜೆಗೂ ತಾನು ಏನು ಸೇವಿಸಬೇಕು ತಾನು ಏನು ಧರಿಸಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಈ ಹಕ್ಕು ಸಂವಿಧಾನದಲ್ಲೇ (Constitution) ಇದೆ. ಇದು ಅವರ ಮೂಲಭೂತ ಹಕ್ಕು. ಹಾಗಾಗಿ ಮುಖ್ಯಮಂತ್ರಿಗಳು ಆ ಅರ್ಥದಲ್ಲಿ ಹೇಳಿದ್ದಾರೆ ಎಂದರು. ಬಿಜೆಪಿಯವರು ಅದನ್ನೇ ಮೂಲವಾಗಿ ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ.
iPhone 16 ಲೈನ್ಅಪ್ ಬಗ್ಗೆ ನಿಮಗೇನು ಗೊತ್ತು?: A18 ಚಿಪ್ ಯಾಕೆ ಹಾಕ್ತಾರೆ ಗೊತ್ತಾ?
ಕಾನೂನನ್ನು ಪರಿಶೀಲನೆ ಮಾಡಿಯೇ ಮಾಡುತ್ತೇವೆ. ಕಾನೂನನ್ನ ಬಿಟ್ಟು ಮಾಡುವುದಕ್ಕೆ ಹೋಗುವುದಿಲ್ಲ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು. ನಾವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದೇವೆ. ಎಲ್ಲಾ ಕಡೆ ಶಾಂತಿ ಇರಬೇಕು ಅಂತ ಹೇಳಿದ್ದೇವೆ ಅದನ್ನು ಮಾಡುತ್ತೇವೆ. ಸಮಾಜದಲ್ಲಿ ಅನೇಕ ವಿಚಾರಗಳು ಬಂದೇ ಬರುತ್ತೇವೆ. ಅದನ್ನು ಯಾವ ರೀತಿ ಹ್ಯಾಂಡಲ್ ಮಾಡುತ್ತೇವೆ ಎನ್ನುವುದು ಮುಖ್ಯ ಎಂದರು.