ಬೆಂಗಳೂರು: ನಾವು ಆಪರೇಷನ್ಗೆ ಸಿದ್ದರಿದ್ದೆವು, ಒಳ್ಳೆಯ ಹುಲಿಗಳು ಇದ್ದವು. ಆದರೆ ನಮ್ಮವರೇ ಕೆಲವರು ಕರೆತರಲು ಒಪ್ಪಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 20 ಸೀಟಿಗಿಂತ ಹೆಚ್ಚು ಗೆದ್ದೇ ಗೆಲ್ಲುತ್ತೇವೆ.
ಅಷ್ಟು ಆತ್ಮವಿಶ್ವಾಸ ನಮಗಿದೆ. ಬಿಜೆಪಿಯವರ (BJP) ಗೊಂದಲ ನೀವು ನೋಡುತ್ತಿದ್ದೀರಿ. ನಮ್ಮ ಟಿಕೆಟ್ ಘೋಷಣೆ ಆದಮೇಲೆ ಯಾವುದು ಗೊಂದಲ ಆಗಲ್ಲ ಎಂದರು.
ಪಿಯುಸಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹63,000 ಸಂಬಳ! ಈಗಲೇ ಅರ್ಜಿ ಸಲ್ಲಿಸಿ
ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಸಂತೋಷದಿಂದ ಆತ್ಮವಿಶ್ವಾಸದಿಂದ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಮತದಾರರು ಎಲ್ಲರ ಜೊತಗೂ ನಾವು ಏಳೆಂಟು ತಿಂಗಳಿನಿಂದ ತಯಾರಿ ಮಾಡಿದ್ದೇವೆ. ನುಡಿದಂತೆ ನಡೆದು ತೋರಿಸಿದ್ದರಿಂದ ಬಹಳ ಆತ್ಮವಿಶ್ವಾಸದಿಂದ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು. ಮಾರ್ಚ್ 19ರ ರಾತ್ರಿ ಅಥವಾ 20 ರ ಬೆಳಿಗ್ಗೆ ನಮ್ಮ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತೇವೆ. ಆಡಳಿತರೂಡ ಪಕ್ಷದವರು ತಮಗೆ ಅನುಕೂಲಕ್ಕೆ ತಕ್ಕಂತೆ ದಿನಾಂಕ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.