ಬೆಂಗಳೂರು:- ವಿ.ಸೋಮಣ್ಣ ಕಾಂಗ್ರೆಸ್ ಸೇರಿದರೆ ನಮ್ಮದೇನು ತಕರಾರಿಲ್ಲ ಎಂದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮಾಜಿ ಸವಿವ ವಿ. ಸೋಮಣ್ಣ ಕಾಂಗ್ರೆಸ್ ಸೇರಿದರೆ ನಮ್ಮದೇನು ತಕರಾರು ಇಲ್ಲ. ಅವರು ಬಂದ್ರೆ ನಾವು ಸ್ವಾಗತ ಮಾಡುತ್ತೇವೆ. ಏನು ಬೆಳವಣಿಗೆ ಆಗುತ್ತಿದೆ ಎಂದು ಗೊತ್ತಿಲ್ಲ. ಸೋಮಣ್ಣ ಅವರು ಬಿಜೆಪಿ ಪ್ರಭಾವಿ ಮುಖಂಡರಾಗಿದ್ದಾರೆ. ಅವರು ಕಾಂಗ್ರೆಸ್ಗೆ ಬಂದರೆ ಸ್ವಾಗತ ಮಾಡುತ್ತೇವೆ. ರಾಜಕೀಯ ರಂಗದಲ್ಲಿ ಅವರದ್ದೇ ಆದ ಶಕ್ತಿ ಇರುತ್ತದೆ ಎಂದು ತಿಳಿಸಿದರು.
ಪುತ್ತೂರಿನಲ್ಲಿ ಬಜರಂಗದಳದವರ ಗಡಿಪಾರು ಮಾಡಲು ನೋಟಿಸ್ ನೀಡಲಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರೂ ಸಹ ಕಾನೂನನ್ನು ಹೊರತು ಪಡಿಸಿ ಕೆಲಸ ಮಾಡಲಾಗಲ್ಲ. ಇಲಾಖೆಯಲ್ಲಿ ಬೇರೇನೂ ಕೆಲಸ ಮಾಡಲಾಗಲ್ಲ. ಬಜರಂಗದಳದವರಾಗಲಿ, ಬೇರೆಯವರೇ ಇರಲಿ, ಸಂಘ – ಸಂಸ್ಥೆಗಳಿರಲಿ ಹಾಗೂ ವೈಯಕ್ತಿಕವೇ ಇರಲಿ ಕಾನೂನಿನ ಚೌಕಟ್ಟಿನಲ್ಲಿ ಇದ್ದರೆ ನಮ್ಮ ಸಹಕಾರ ಇರುತ್ತದೆ. ಪೊಲೀಸ್ ಇಲಾಖೆ ಇರೋದು ಯಾಕೆ? ಎಂದು ಪ್ರಶ್ನಿಸಿದರು.
ಪೊಲೀಸ್ ಇರುವುದು ಕಾನೂನು ವಿರುದ್ಧ ಇರುವವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕಾಗಿದೆ. ದುರುದ್ದೇಶದಿಂದ ಯಾವ ಪೊಲೀಸ್ ಕೂಡ ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ಸರ್ಕಾರ ಇರುವುದು ಶಾಂತಿ ಕಾಪಾಡುವುದಕ್ಕಾಗಿದೆ. ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಬೇಕು. ಅದು ನಮ್ಮ ಪ್ರಣಾಳಿಕೆಯಲ್ಲಿಯೇ ಇದೆ ಎಂದರು.