ಬೆಳಗಾವಿ: ಅಂಬೇಡ್ಕರ್ ಅವರಿಗೆ ಗೌರವ ಕೊಡದವರು ಅವರ ಹೆಸರು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಯತ್ನಾಳ ಹೇಳಿಕೆಗೆ ಸತೀಶ್ ಜಾರಕಿಹೋಳಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಅವರು ಹಾಗೆ ಹೇಳುತ್ತಾರೆ, 15 ದಿನಗಳ ಹಿಂದೆಯೆ ತಾಜಾ ಆಗಿ ಅಂಬೇಡ್ಕರ್ ಬಗ್ಗೆ ಮಾತಾಡಿದ್ದಾರೆ. ಮಾಧ್ಯಮದವರು ಅವರನ್ನ ಮೊದಲು ಪ್ರಶ್ನೆ ಮಾಡಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಸನಗೌಡ ಯತ್ನಾಳ್ ವಾಗ್ದಾಳಿ
ಇನ್ನೂ ಡಿಸಿಎಂ ಡಿಕೆಶಿ ಹಾಗೂ ಸತೀಶ್ ನಡುವಿನ ಶೀತಲ ಸಮರ ವಿಚಾರವಾಗಿ ಪ್ರತಿಕ್ರಿಯಿಸಿ, ಮುಸುಕಿನ ಗುದ್ದಾಟ, ಕೋಲ್ಡ್ ವಾರ್ ಎಲ್ಲಿ ನಡೆಯುತ್ತಿದೆ ನನಗೆ ಗೊತ್ತಿಲ್ಲಾ. ನಾನೇನು ಖಾಲಿ ಇಲ್ಲಾ, ನಿನ್ನೆ ಇವತ್ತು ಮೊನ್ನೆ ಕಾರ್ಯಕ್ರಮ ಇತ್ತು. ಹಾಗಾಗಿ ಹೊರಗಡೆ ಇದ್ದೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕು. ಅಧ್ಯಕ್ಷರಿದ್ದಾರೆ ಅವರ ಜೊತೆಗೆ ಬಹಳಷ್ಟು ಟೀಂಗಳು ಇವೆ. ನಮಗೆ ಕೊಟ್ಟ ಜವಾಬ್ದಾರಿಯನ್ನು ನಾವ ಮಾಡುತ್ತೇವೆ. ಬೇರೆ ಬೇರೆ ಶಾಸಕರು ಮಂತ್ರಿಗಳಿದ್ದಾರೆ ಇದ್ದಾರೆ ಅವರು ಮಾಡ್ತಾರೆ. ಅದನ್ನ ಅವರನ್ನೆ ಕೇಳಿ, ನಾನ್ ಆ ರೀತಿ ಹೇಳಿಕೆ ಕೊಟ್ಟಿಲ್ಲಾ. ಅವರು ಮಾತಾಡಿದ್ದು , ಬೆಂಗಳೂರಿನಲ್ಲಿ ಮಾತಾಡಿದ್ದು ನಾನ ಉತ್ತರ ನೀಡಲ್ಲ. ಯಾವ ಉದ್ದೇಶಕ್ಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಎಲ್ಲವೂ ಸರಿ ಇದೆ. ನಮ್ಮ ಉದ್ದೇಶ ಕಾರ್ಯಕ್ರಮ ಯಶಸ್ವಿ ಮಾಡುವುದು ಅಷ್ಟೇ. ರಾಜ್ಯದಲ್ಲಿ ಬದಲಾವಣೆ ಮಾಡುವ ಶಕ್ತಿ ನಮ್ಮ ಬಳಿ ಇಲ್ಲಾ. ಅದಕ್ಕೆ ಪಕ್ಷ ಇದೆ. ಪಕ್ಷದ ಹೈಕಮಾಂಡ ತೀರ್ಮಾನ ಮಾಡುತ್ತದೆ ಎಂದರು.