ಬೆಂಗಳೂರು: ಗ್ಯಾರಂಟಿ ಜಾರಿಗೆ ತರೋದಕ್ಕೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಬಗ್ಗೆ ಶಾಸಕ ಗವಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ಗ್ಯಾರಂಟಿಗಳ ಬಗ್ಗೆ ಪಕ್ಷ, ಸರ್ಕಾರ ತೀರ್ಮಾನ ಕೈಗೊಂಡಿದೆ. ಗ್ಯಾರಂಟಿ ಜಾರಿಗೆ ತರೋದಕ್ಕೆ ಕದ್ದು ಮುಚ್ಚಿ ತೀರ್ಮಾನ ಮಾಡಿಲ್ಲ. ಇದರಿಂದ ಜನ ನಮಗೆ ಮತ ಹಾಕಿದ್ದಾರೆ.
ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಅನುದಾನ ಕೊಡ್ತಿದೆ, ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಜಾರಿ ಮಾಡೋದು ನಮ್ಮ ಕರ್ತವ್ಯ.
ರೈತರೇ ಗಮನಿಸಿ.. ಪ್ರತಿ ಹೆಕ್ಟೇರ್ʼಗೆ 10,000 ರೂಪಾಯಿ ನೀಡಲಿದೆ ಈ ಯೋಜನೆ! ಇಂದೇ ಅರ್ಜಿ ಸಲ್ಲಿಸಿ
ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳಲಿ, ತಪ್ಪಿಲ್ಲ, ನಾನೂ ಕೇಳ್ತೀನಿ. ಸರ್ಕಾರ ಅನುದಾನ ಕೊಡ್ತಿದೆ. ಕಾರ್ಯಕ್ರಮಗಳು ಯಾವುದೂ ನಿಂತಿಲ್ಲ. ಹಿಂದಿನ ಸರ್ಕಾರ ಸಾಕಷ್ಟು ಬಿಲ್ ಬಾಕಿ ಉಳಿಸಿಹೋಗಿದ್ರು. ಕೇಂದ್ರವೂ ಸರಿಯಾದ ಅನುದಾನ ಕೊಡ್ತಿಲ್ಲ. ಕೇಂದ್ರದ ಅನುದಾನ ತಂದು, ನಮ್ಮ ಸಪನ್ಮೂಲವೂ ಹೆಚ್ಚಿಸಿಕೊಳ್ತೇವೆ ಎಂದು ಭರವಸೆ ನೀಡಿದರು.