ಕೋಲಾರ: ಹೊಸ ಸರ್ಕಾರ ಸಂವಿಧಾನ ಬದಲಾಯಿಸಲು ಅಲ್ಲ ಅದನ್ನು ಬಲಪಡಿಸಲು ಬಂದಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯಾಲಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ರಾಮದಾಸ್ ಅಥವಲೇ ಅವರು ಹೇಳಿದರು.
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಗಾನಹಳ್ಳಿ ಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ರವರ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪುತಳಿ ಅನಾವರಣ ಮಾಡಿ ನಂತರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಣ್ಮಕ್ಕಳೇ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರ: ಸದ್ದಿಲ್ಲದೆ ಬರುತ್ತೆ ಕ್ಯಾನ್ಸರ್ ಹುಷಾರ್!
ಹೊಸ ಸರ್ಕಾರ ಸ್ಪಷ್ಟ ಬಹುಮತ ಪಡೆದಿದೆ. ಪ್ರಧಾನಿ ಮೋದಿ ಅವರ ಜನ ಪ್ರಿಯತೆ ಕಡಿಮೆಯಾಗಿಲ್ಲ. ಚುನಾವಣೆಯಲ್ಲಿ ಅವರ ಜನಪ್ರಿಯತೆಗೆ ಧಕ್ಕೆ ತರಲು ವಿರೋಧಿಗಳು ಪ್ರಯತ್ನಿಸಿದ್ದರು.ಕಾಂಗ್ರೆಸ್ ಕಾಲದಲ್ಲಿ ಆಗದ ಅಭಿವೃದ್ದಿ ಕೆಲಸಗಳು ಮೋದಿ ಅವರ ಕಾಲದಲ್ಲಿ ಆಗಿವೆ. ಕರ್ನಾಟಕದಲ್ಲೂ ಈ ಬಾರಿ ನಮಗೆ ಉತ್ತಮ ಬೆಂಬಲ ಸಿಕ್ಕಿದೆ.ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಯಿತು.
ಮಹರಾಷ್ಟ್ರದಲ್ಲಿ ಕೊಂಚ ಹಿನ್ನಡೆಯಾಯಿತು.ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಸುಳ್ಳು ಸುದ್ದಿ ಹರಡಿಸಿದ ವಿಚಾರ ಪ್ರಭಾವ ಬೀರಿದೆ. ಅಂಬೇಡ್ಕರ್ ಅವರು ಮಹಾರಾಷ್ಟ್ರದ ವರು ಅದಕ್ಕಾಗಿ ಅಲ್ಲಿ ಈ ವಿಚಾರ ಪರಿಣಾಮ ಬೀರಿದೆ. ಆದಾಗ್ಯ್ಯೂ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದೇವೆ. ಮುಂದಿನ ಐದು ವರ್ಷಗಳ ಕಾಲ ಸರ್ಕಾರ ನಿರಾತಂಕವಾಗಿ ನಡೆಯಲಿದೆ. ವಿಪಕ್ಷಗಳು ಸಹ ಇದನ್ನ ಸಾಕ್ಷೀಕರಿಸುತ್ತವೆ.ಪ್ರಧಾನಿ ಮೋದಿ ಅವರು ತುಂಬಾ ಯೋಚಿಸಿ ಕೆಲಸ ಮಾಡುತ್ತಾರೆ.ನಮ್ಮ ಸರ್ಕಾರದಲ್ಲಿ ಯಾವುದೆ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಗೆ 99 ಸ್ಥಾನ ಲಭಿಸಿವೆ ಆದ್ರೆ ಬಿಜೆಪಿಗೆ 294ಸ್ಥಾನ ಸಿಕ್ಕಿದೆ ಎಂದರು.
ವಿರೋಧ ಪಕ್ಷದವರು ಏನು ಮಾಡಿದರೂ ನಮ್ಮ ಸರ್ಕಾರ 5ವರ್ಷ ಪೂರ್ಣಗೊಳಿಸಲಿದೆ.ವಿರೋಧ ಪಕ್ಷದವರಿಗೆ ಅಧಿಕಾರದ ಆಸೆ ಹೆಚ್ಚಾಗಿದೆ.ಮುಂದಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲೂ ಒಡಕು ಉಂಟಾಗಬಹುದಾದ ಸಾಧ್ಯತೆ ದಟ್ಟವಾಗಿದೆ.ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ದೆವೇಗೌಡರು, ಪವನ್ ಕಲ್ಯಾಣ್ ನಮ್ಮ ಜೊತೆಗಿದ್ದಾರೆ.ಸರ್ಕಾರಕ್ಕೆ ಯಾವುದೆ ತೊಂದರೆ ಇಲ್ಲ.ಮನ ಮೋಹನ್ ಸಿಂಗ್ ಸರ್ಕಾರ ಹತ್ತು ವರ್ಷ ಗಳ ಆಡಳಿತ ನೀಡಿದೆ.
ಆದರೆ ಅವರು 200 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು, ನರಸಿಂಹರಾವ್ ನೇತೃತ್ವದ ಸರ್ಕಾರಕ್ಕೂ ಬಹುಮತ ಇರಲಿಲ್ಲ. ಆದರೆ ಎಲ್ಲಾ ಐದು ವರ್ಷ ಸರ್ಕಾರ ಮಾಡಿದ್ದಾರೆ, ನಮಗೆ ಸ್ಪಷ್ಟ ಬಹುಮತ ಇದೆ 5ವರ್ಷ ಸರ್ಕಾರ ನಡೆಸುತ್ತೇವೆ.ನಮ್ಮ ವಿರೋಧಿಗಳಿಗೆ ಹೆಚ್ವಿನ ಸ್ಥಾನ ಬಂದಿರಬಹುದು. ಆದರೆ ಪ್ರಜಾಪ್ರಭುತ್ವದ ತೀರ್ಪು ಒಪ್ಪಿ ನಡೆಯುತ್ತೇವೆ.ನಮಗೆ ಹಿನ್ನಡೆಯಾಗಲು ಕಾರಣ ಕುರಿತು ಆತ್ಮಾವಲೋಕನ ಮಾಡಲಿದ್ದೇವೆ ಎಂದರು.
ಪತ್ರಿಕಾ ಘೋಷ್ಟಿಯಲ್ಲಿ ಸಂಸದ ಎಂ ಮಲ್ಲೇಶಬಾಬು, ಸಮಾಜಸೇವಕ ಸಿ. ಎಂ ಆರ್. ಶ್ರೀನಾಥ್,ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.