ಗದಗ:- ಜಾತಿಗಣತಿ, ಒಳ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
BBK11: ಕಿಚ್ಚನ ಮಾತಿಗೆ ಲಾಯರಣ್ಣ ಗಪ್ ಚುಪ್: ಇದು ಹೆಬ್ಬುಲಿ ಗತ್ತು ಕಣ್ರೋ ಅಂದ್ರು ಫ್ಯಾನ್ಸ್!
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ಹಾಗೂ ಒಳ ಮೀಸಲಾತಿ ವಿಚಾರಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ ಜಾತಿಗಣತಿ ಪ್ರಾಮಾಣಿಕವಾಗಿ, ಪಾರದರ್ಶಕವಾಗಿರಬೇಕು ಎಂದರು.
ಜಾತಿಗಣತಿ ಯಾವುದೇ ಸಮುದಾಯ ಟಾರ್ಗೆಟ್ ಮಾಡದ ರೀತಿಯಲ್ಲಿ ಇರಬಾರದು. ಎಲ್ಲಾ ಸಮುದಾಯದ ನಿಖರವಾದ ಮಾಹಿತಿ ಪಡೆದುಕೊಂಡಿರಬೇಕು ಎಂದರು. ಕಾನೂನಾತ್ಮಕವಾಗಿ ದತ್ತಾಂಶ ಕ್ರೂಢಿಕರಣ ಇರಬೇಕು.
ಪ್ರಾಮಾಣಿಕ ಜಾತಿಗಣತಿ ಮಾಡಲು ನಮ್ಮದು ಸಂಪೂರ್ಣ ಸಹಕಾರವಿದೆ. ಅವೈಜ್ಞಾನಿಕವಾಗಿರುವ, ದುರುದ್ದೇಶ ಕೂಡಿರುವ, ಸಮುದಾಯಗಳಿಗೆ ನೋವುಂಟು ಮಾಡುವ ಯಾವುದೇ ಜಾತಿಗಣತಿಯನ್ನು ಪಂಚಮಸಾಲಿ ಒಪ್ಪೊದಿಲ್ಲ ಎಂದರು.
ಇನ್ನು ಒಳ ಮೀಸಲಾತಿ ಎಸ್.ಸಿ, ಎಸ್.ಟಿ ಗೆ ಸಂಬಂಧಿಸಿದ್ದು. ಪಂಚಮಸಾಲಿ ನಾವು 3-ಬಿ ನಲ್ಲಿದ್ದೇವೆ. ನಮ್ಮ ಸಮುದಾಯಲ್ಲಿರುವ ಜನಸಂಖ್ಯೆಗೆಯೇ ಮೀಸಲಾತಿ ಸಾಕಾಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಸಹ ನ್ಯಾಯ ಸಿಗುತ್ತಿಲ್ಲ.
ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ಬೇಕು ಎಂದು ಕೇಳುತ್ತಿದ್ದೇವೆ. ಜಾತಿಗಣತಿ ವಿಚಾರದಲ್ಲಿ ಅನೇಕ ಕಡೆಗಳಲ್ಲಿ ಅಪಸ್ವರ ಎದ್ದಿದೆ. ಪ್ರಬಲ ಸಮುದಾಯಗಳ ಸಂಖ್ಯೆ ಕಡಿಮೆ ಇದೆ ಎಂಬ ಆರೋಪವಿದೆ. ಮತ್ತೊಮ್ಮೆ ಜಾತಿಗಣತಿ ಮಾಡಿ ಎಂದು ಅನೇಕ ಶಾಸಕರು ಸಿಎಂಗೆ ಮನವಿ ಕೊಟ್ಟಿದ್ದಾರೆ. ಮತ್ತೊಮ್ಮೆ ಪಾರದರ್ಶಕ ಜಾತಿಗಣತಿ ಮಾಡಿದರೆ ಒಳಿತು ಎಂಬ ಭಾವನೆ ನಮ್ಮದು ಎಂದು ಹೇಳಿದ್ದಾರೆ.