ಹುಬ್ಬಳ್ಳಿ:- ಬೆಳಗಾವಿ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಆಡಳಿತಯಂತ್ರ ಸರಿಯಾಗಿ ಇರಬೇಕೆಂದರೆ ಜಿಲ್ಲೆಗಳು, ತಾಲೂಕು ಚಿಕ್ಕ ಚಿಕ್ಕದಾಗಿರಬೇಕು. ಬೆಳಗಾವಿಯು ಇಬ್ಭಾಗವಾಗಿ ಪ್ರತ್ಯೇಕ ಜಿಲ್ಲೆಯಾಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಯತ್ನಾಳ್ರ ವೈಯಕ್ತಿಕ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಸಿಎಂ ಆಗಲು ಮಹಾನ್ ನಾಯಕ ಸಾವಿರ ಕೋಟಿ ತೆಗೆದಿಟ್ಟಿದ್ದಾರೆ ಅನ್ನೋದು ಯತ್ನಾಳ್ ವೈಯಕ್ತಿಕ ಹೇಳಿಕೆ. ಯತ್ನಾಳ್ ಹೇಳಿಕೆಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅವರು ಪ್ರತ್ಯೇಕ ಸಭೆ ಮಾಡಿದ್ದರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ಯಾಕೆ ಅದರ ಬಗ್ಗೆ ಮಾತನಾಡಲಿ. ಈ ನಿಟ್ಟಿನಲ್ಲಿ ಪಕ್ಷ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಅವರ ಹೇಳಿಕೆ ಅವರಿಗೇ ಸೀಮಿತ ಎಂದು ಹೇಳಿದರು.
ಸಿಎಂ ರಾಜೀನಾಮೆ ವಿಚಾರವಾಗಿ ಮಾತನಾಡಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಆದರೆ ಭಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ? ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಎಲ್ಲರ ಮೇಲೆ ಎಫ್ಐಆರ್ ಹಾಕಿಸಿ ತೊಂದರೆ ಕೊಡುವುದು ಆರಂಭ ಆಗಿದೆ. ಮುಡಾ ಹಗರಣದಲ್ಲಿ ಜನರ ಆಲೋಚನೆಯನ್ನು ಬದಲಾಯಿಸಿವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು