ಇದಕ್ಕಿಂತ ಮೊದಲೂ ಒಂದು ಪಂದ್ಯ ಸೋತು, ಕಮ್ಬ್ಯಾಕ್ ಮಾಡಿದ ಇತಿಹಾಸ ನಮಗಿದೆ ಎಂದು ಭಾರತದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಇನ್ನಿಂಗ್ಸ್ನಲ್ಲಿ 46ಕ್ಕೆ ಆಲೌಟ್ ಆಗಿದ್ದನ್ನು ಉಲ್ಲೇಖಿಸಿದರು. ‘ಈ ಪಂದ್ಯದ ಬಗ್ಗೆ ನಾನು ಹೆಚ್ಚೇನೂ ಮಾತನಾಡಲ್ಲ.
ಅದನ್ನಿಟ್ಟುಕೊಂಡು ಆಟಗಾರರು ಹಾಗೂ ತಂಡದ ಬಗ್ಗೆ ಮಾತನಾಡುವುದು ಸರಿಯಲ್ಲ. ನಾವು ಸೋತಿದ್ದೇವೆ. ಆದರೆ ಮೊದಲ ಇನ್ನಿಂಗ್ಸ್ನಲ್ಲಿ ಕುಸಿದ ಬಳಿಕ ನಾವು ಹೋರಾಡಿದ ರೀತಿ ಬಗ್ಗೆ ಹೆಮ್ಮೆಯಿದೆ. ಸಣ್ಣ ತಪ್ಪಾಗಿದ್ದರೂ ಎಲ್ಲವೂ ಇಲ್ಲಿಗೆ ಮುಗಿದಿಲ್ಲ. ಇದಕ್ಕಿಂತ ಮೊದಲೂ ಒಂದು ಪಂದ್ಯ ಸೋತು, ಕಮ್ಬ್ಯಾಕ್ ಮಾಡಿದ ಇತಿಹಾಸ ನಮಗಿದೆ’ ಎಂದು ಹೇಳಿದ್ದಾರೆ.
ಪದೇ, ಪದೇ ಮೂತ್ರ ವಿಸರ್ಜನೆ ಹೋಗ್ತಿದ್ರೆ ಜೋಪಾನ! ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣ
ಇನ್ನು, ರಿಷಭ್ ಪಂತ್ ಗಾಯದ ಬಗ್ಗೆ ಮಾತನಾಡಿರುವ ರೋಹಿತ್, ‘ದೊಡ್ಡ ಶಸ್ತ್ರಚಿಕಿತ್ಸೆ ನಡೆದಿದ್ದ ಕಾಲಿಗೆ ಮತ್ತೆ ಗಾಯವಾಗಿದೆ. ಅವರು ಬ್ಯಾಟ್ ಮಾಡುವಾಗಲೂ ರನ್ನಿಂಗ್ಗೆ ಕಷ್ಟಪಡುತ್ತಿದದ್ದಾರೆ. ಹೀಗಾಗಿ ರಿಷಭ್ ಗಾಯದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.