ಕಲಬುರಗಿ: ನಾವು ಬೇಡ ಅಂದ್ರೂ ಕಾಂಗ್ರೆಸ್ಸಿಗರೇ ಬಹಳಷ್ಟು ಅಸ್ತ್ರ ಕೊಟ್ಟಿದ್ದಾರೆ ಎಂದು ಕಲಬುರಗಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಸುವರ್ಣಸೌಧದಲ್ಲಿರುವ ಸಾರ್ವಕರ್ ಫೋಟೋ ತೆಗೆಯುತ್ತೇವೆ ಎಂದಿದ್ದಾರೆ.
ಇದು ಸಾರ್ವಕರ್ಗೆ ಮಾಡುತ್ತಿರುವ ಅಪಮಾನ ಎಂದಿದ್ದಾರೆ. ಇನ್ನೂ ಹಲೋ ಅಪ್ಪಾ ಅಂತ ಅವರೇ ಕೊಟ್ಟಿರೋ ಅಸ್ತ್ರ ವಿದೆ. ಹೀಗಾಗಿ ಬೆಳಗಾವಿಯಲ್ಲಿ ಸರ್ಕಾರದ ಕಿವಿ ಹಿಂಡುತ್ತೇವೆ ಎಂದು ಕಲಬುರಗಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.