ತುಮಕೂರು: ಶಕ್ತಿ ಯೋಜನೆ ಜಾರಿ ಮಾಡುವಾಗ ಯಾವ ಭೇದ-ಭಾವ ಇಲ್ಲದೇ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರಿನಲ್ಲಿ 9,000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆ ಜಾರಿ ಮಾಡುವಾಗ ಯಾವ ಭೇದ-ಭಾವ ಇಲ್ಲದೇ ಮಾಡಿದ್ದೇವೆ. ಬಡವರಿಗೆ ಸಾಮಾಜಿಕವಾಗಿ ಶಕ್ತಿ ತುಂಬಿದ್ದೇವೆ. ಸಮ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿ.
ಬಹಳ ಜನ ಗ್ಯಾರಂಟಿ ಯೋಜನೆ ಮೇಲೆ ಟೀಕೆ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತಿದೆ ಎನ್ನುತ್ತಾರೆ. ಇವತ್ತು ಇಷ್ಟೊಂದು ಸವಲತ್ತು ಕಾಮಗಾರಿಗಳ ಶಂಕುಸ್ಥಾಪನೆ ಅಭಿವೃದ್ಧಿ ಅಲ್ವಾ? ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷವೂ ಕೊಟ್ಟಿದ್ದೇವೆ. ರಚನಾತ್ಮಕ ವಾದ ಟೀಕೆಗಳನ್ನು ಮಾತ್ರ ಸ್ವಾಗತಿಸುತ್ತೇನೆ. ಗ್ಯಾರಂಟಿ ಯೋಜನೆಗೆ 50,000 ಕೋಟಿ ಹಣ ಮೀಸಲಿಡಲಾಗಿದ ಎಂದು ವೇದಿಕೆ ಮೇಲೆ ಇದ್ದ ಮೈತ್ರಿ ನಾಯಕರಿಗೆ ತಿವಿದರು.
ನಿಮಗೆ ಗೊತ್ತೆ..? ವೀಸಾ ಬೇಡ, ಭಾರತೀಯ Passport ಒಂದಿದ್ದರೆ ಸಾಕು ಈ ದೇಶಗಳಿಗೆ ಹೋಗಬಹುದು!
ಸಂಪತ್ತು ಹೆಚ್ಚು ಕ್ರೂಢಿಕರಣ ಮಾಡಿ ಗ್ಯಾರಂಟಿ ಕೊಡುತ್ತೇವೆ. ಜಿಡಿಪಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮುಂದಿದೆ. ಕರ್ನಾಟಕದ ಜಿಡಿಪಿ 10.2 ಇದೆ. ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕೆ ಜಿಡಿಪಿ ಸಾಕ್ಷಿಯಾಗಿದೆ. ಅನ್ನಭಾಗ್ಯ ಕಾರ್ಯಕ್ರಮ ಶುರುಮಾಡಿದ್ದು ನಾನು. 5 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು ನಾನು. 5 ಕೆಜಿಯನ್ನು 7 ಕೆಜಿ ಮಾಡಿದ್ದು ನಾವು. ಎಸ್ಸಿ-ಎಸ್ಟಿಗಳ ವಿಶೇಷ ಅನುದಾನ ಜಾರಿಗೆ ತಂದದ್ದು ನಾವು ಎಂದು ಮೈತ್ರಿ ನಾಯಕರಿಗೆ ಕುಟುಕಿದರು.