ಅಮೇರಿಕಾ: ಹಮಾಸ್ ಮತ್ತು ರಷ್ಯಾ ಎರಡೂ ದೇಶಗಳೂ ಪ್ರಜಾಪ್ರಭುತ್ವವನ್ನು “ನಿರ್ಮೂಲನೆ” ಮಾಡಲು ಹೊರಟಿವೆ, ಅಮೇರಿಕಾ, ಉಕ್ರೇನ್ ಮತ್ತು ಇಸ್ರೇಲ್ಗೆ ನೆರವನ್ನು ನೀಡಿ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಓವಲ್ ಕಚೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾವೋದ್ರಿಕ್ತ ಭಾಷಣದಲ್ಲಿ ಕೋರಿದ್ದಾರೆ. ಹಮಾಸ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಬೆದರಿಕೆಗಳನ್ನು ಪ್ರತಿನಿಧಿಸುತ್ತಾರೆ.
ಇವರಿಬ್ಬರೂ ನೆರೆಯ ದೇಶಗಳ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿದ್ದಾರೆ” ಎಂದು ಬಿಡೆನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. “ಒಂದು ದೊಡ್ಡ ರಾಷ್ಟ್ರವಾಗಿ ನಮ್ಮ ಜವಾಬ್ದಾರಿಯಂತೆ ಕ್ಷುಲ್ಲಕ ಪಕ್ಷಪಾತದ, ದ್ವೇಷದ ರಾಜಕಾರಣವನ್ನು ನಾವು ಎಂದಿಗೂ ಸುಮ್ಮನೆ ಬಿಡಲಾರೆವು. ನಾವು ಹಮಾಸ್ನಂತಹ ಭಯೋತ್ಪಾದಕರು ಮತ್ತು ಪುಟಿನ್ನಂತಹ ನಿರಂಕುಶಾಧಿಕಾರಿಗಳನ್ನು ಗೆಲ್ಲಲು ಬಿಡುವುದಿಲ್ಲ,” ಎಂದು ಬಿಡೆನ್ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದ್ದಾರೆ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಉಕ್ರೇನ್ ಮತ್ತು ಇಸ್ರೇಲ್ಗೆ ಸಹಾಯವಾಗಿ ಬೃಹತ್ ಹಣಕಾಸಿನ ನಿಧಿಯನ್ನು ಅನುಮೋದಿಸಲು ಶುಕ್ರವಾರ ಕಾಂಗ್ರೆಸ್ಗೆ ಮನವಿ ಮಾಡುವುದಾಗಿ ಹೇಳಿರುವ ಬಿಡೆನ್, “ಇದು ಜಾಗತಿಕ ನಾಯಕನಾಗಿ ನಾನು ಯುನೈಟೆಡ್ ಸ್ಟೇಟ್ಸ್ನ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿದೆ” ಎಂದು ತಿಳಿಸಿದ್ದಾರೆ. “ಇದು ಅನೇಕ ತಲೆಮಾರುಗಳವರೆಗೆ ಅಮೇರಿಕನ್ನರ ಭದ್ರತೆಗಾಗಿ ಮಾಡುವ ಸ್ಮಾರ್ಟ್ ಹೂಡಿಕೆಯಾಗಿದೆ” ಎಂದು ಐತಿಹಾಸಿಕ ರೆಸಲ್ಯೂಟ್ ಡೆಸ್ಕ್ನಿಂದ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದಾರೆ.