ಚಾಮರಾಜನಗರ: ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಪಾಪ ಆ ಸ್ವಾಮೀಜಿ ನಕ್ಸಲೈಟ್ (Naxalite) ಆಗಬೇಕಿತ್ತು. ಕಮ್ಯೂನಿಸ್ಟ್ (Communist) ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲೆ ಬರ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಶ್ರೀ (Sanehalli Shree) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಮುಂದಿನ ಬಾರಿಯಾದರೂ ಕೊಡಲಿ ಎಂಬುದು ಅವರ ಉದ್ದೇಶವಾಗಿದೆ. ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ ಎಂದು ಹರಿಹಾಯ್ದರು. ಹಿಂದೂ ಧರ್ಮದ ವಿರುದ್ಧ ಮಾತನಾಡಲೂ ಪೇಯ್ಡ್ ಸಾಹಿತಿಗಳಿದ್ದರೆ, ಪೇಯ್ಡ್ ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ಕೊಟ್ಟರೆ ಮಠಕ್ಕೆ ಕೋಟ್ಯಂತರ ರೂ. ಅನುದಾನ ಕೊಡುತ್ತಾರೆ ಎಂಬ ನಂಬಿಕೆ. ಹೀಗಾಗಿ ಹಿಂದೂ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.