ಬೆಳಗಾವಿ: 500 ವರ್ಷದ ಕೆಳಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ರು, ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿ ಬಾಬ್ರಿ ಮಸೀದಿ ಅಂದ್ರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೆಯುತ್ತೇನೆ ಎಂದು ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ಧ್ವಂಸ ಆಗುತ್ತೆ ದೇವಸ್ಥಾನ ತಲೆ ಎತ್ತುತ್ತೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಂಮರು ನೀವಾಗಿ ನೀವೆ ಕಿತ್ತು ಹಾಕಿ. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕ್ತಿವಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಸಿದ್ದರಾಮಯ್ಯ ನಾವು ಜಾತ್ಯಾತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯಾತೀತವಾದಿಗಳು. ಹಿಂದೂ ಮುಸ್ಲಿಂ ಅನ್ಯೋನ್ಯವಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ ನಾವು ಅದರ ಗೊಡವೆಗೆ ಬರಲ್ಲ. ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಎಂದು ಹೇಳ್ತಿತ್ತು. ನೀವಾಗಿ ನೀವೆ ಮಥುರಾ ಹಾಗೂ ಕೃಷ್ಣಾದ ಮಸೀದಿ ತಗೆಯಿರಿ. ತೆಗೆಯದಿದ್ದರೆ ಕೊಲೆಗಳಾಗುತ್ತೊ ಇನ್ನೇನಾಗುತ್ತೊ ಗೊತ್ತಿಲ್ಲ’ ಎಂದರು.