ಚಿತ್ರದುರ್ಗ: ಮಾಜಿ ಸಚಿವ ಹೆಚ್. ಏಕಾಂತಯ್ಯ ಅವರು ಮುರುಘಾ ಮಠದಿಂದ ನಿರ್ಮಾಣ ಮಾಡುತ್ತಿರುವ ಕಂಚಿನ ಬಸವ ಪುತ್ಥಳಿ ಅನುದಾನದಲ್ಲಿ ದುರುಪಯೋಗವಾಗಿದೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಇದರಲ್ಲಿ ಯಾವುದೇ ದುರುಪಯೋಗವಾಗಿಲ್ಲ ಎಂದು ಮಠದ ಉಸ್ತುವಾರಿಗಳಾದ ಬಸವಪ್ರಭು ಶ್ರೀಗಳು ಸ್ಪಷ್ಟನೆ ನೀಡಿದರು. ಅವರು ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಮುರುಘಾ ಮಠದಲ್ಲಿ ನಿರ್ಮಾಣವಾಗುತ್ತಿರುವ 320 ಅಡಿಗಳ ಬಸವ ಪುತ್ಥಳಿ ಯಲ್ಲಿ ದುರಪಯೋಗವಾಗಿದೆ ಎಂದು ಅವರು ಆರೋಪಿಸಿರುವುದು ಯಾವುದೋ ದ್ವೇಷದಿಂದ ಮಾಡಿದ್ದಾರೆ.
ಜಿಲ್ಲೆ ಅಭಿವೃದ್ದಿಯಾಗುವುದು ಅವರಿಗೆ ಬೇಡವಾಗಿದೆ ಅನಿಸುತ್ತದೆ. ದುರಪಯೋಗವಾಗಿದೆ ಎಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಐದು ಜನರ ಸಮಿತಿಯೊಂದನ್ನು ರಚಿಸಿದ್ದಾರೆ. ಅವರು ತನಿಖೆ ನಡೆಸಲು ಬಂದಾಗ ಅವರಿಗೆ ಎಲ್ಲಾ ರೀತಿಯ ದಾಖಲೆಗಳನ್ನು ಕೊಡಲು ನಾವು ಸಿದ್ದರಿದ್ದೇವೆ. 25ಕೋಟಿ ಹಣ ಖರ್ಚಾಗಿದೆ. 10 ಕೋಟಿ ಬ್ಯಾಂಕಿನಲ್ಲಿದೆ. ಈ ಹಣದಲ್ಲಿ ಮತ್ತೆ ಕಾಮಗಾರಿ ಆರಂಭವಾಗುತ್ತದೆ . ಏಕಾಂತಯ್ಯ ಅವರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದು, ಯಾವುದೇ ತನಿಖೆ ಎದುರಿಸಲು ಸಿದ್ದರಿದ್ದೇವೆ. ಇದರ ಬಗ್ಗೆ ಕಾನೂನಿ ಹೋರಾಟ ಮಾಡುತ್ತೇವೆ ಎಂದು ಎಂದು ಶ್ರೀಗಳು ಹೇಳಿದರು.