ದಾವಣಗೆರೆ:-ನಾವು ನಮ್ಮ ಹಕ್ಕು ಪಡೆಯಲು ಆಗಲುತ್ತಿಲ್ಲ ಎಂದು ಹೇಳುವ ಮೂಲಕ ಹೆಚ್ ಮಹದೇವಪ್ಪ ಅವರು ಬೇಸರ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬಜೆಟ್ನಲ್ಲಿ ನಿಗದಿಯಾಗಿರುವ ಅನುದಾನ ಮಂಜೂರಾತಿ ಆಗಲಿದೆ. ಇಲಾಖೆವಾರು ಅನುದಾನ ಬಿಡುಗಡೆ ಆಗಲಿದೆ. ಆದರೆ ಸ್ಥಗಿತವಾಗುವುದಿಲ್ಲ ಎಂದು ಹೇಳಿದ್ದಾರೆ.
ಮುಡಾ ಹಗರಣ: ಬಿಜೆಪಿ-ಜೆಡಿಎಸ್ ನ ಬೆಂಗಳೂರು ಟು ಮೈಸೂರು ಪಾದಯಾತ್ರೆ ಯಾವಾಗ ಗೊತ್ತಾ!?
ಗೋದಾಮಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಡೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವ್ಯಾಪ್ತಿಯಲ್ಲಿ 821 ವಸತಿ ಶಾಲೆಗಳಿವೆ. 821 ವಸತಿ ಶಾಲೆಗಳ ಪೈಕಿ 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡವಿದೆ. ಉಳಿದ 201 ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದರು
36 ಕಡೆ ನಮಗೆ ಜಾಗ ಸಿಕ್ಕಿದ್ದು ವಸತಿ ಶಾಲೆ ಕಟ್ಟಡ ನಿರ್ಮಿಸುತ್ತಿದ್ದೇವೆ. ಜಾಗ ಇಲ್ಲದ ಕಡೆ ಜಾಗ ಹುಡುಕಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಎಸ್ಸಿ ಎಸ್ಟಿ ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಎಂದು ಹೇಳಬೇಕು. ಸಂವಿಧಾನದ 17 ಪರಿಚ್ಛೇದದಲ್ಲಿ ಹೇಳಿದಂತೆ ನಡೆದುಕೊಳ್ಳಬೇಕು. ರಾಜಕೀಯ ಅಧಿಕಾರ ನಮ್ಮ ಭವಿಷ್ಯ ಇದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದರೆ ನಾವು ನಮ್ಮ ಹಕ್ಕು ಪಡೆಯಲು ಆಗಲುತ್ತಿಲ್ಲ. ದೇಶದಲ್ಲಿ ಇನ್ನೂ ಸಮಾನತೆ ಬಂದಿಲ್ಲ ಎಂದರು.