ಬೆಂಗಳೂರು: ನಾವೆಲ್ಲ ಶ್ರೀರಾಮಚಂದ್ರನ ಭಕ್ತರೇ ಕೇಂದ್ರ ಸಚಿವರುಗಳು ರಾಜಕೀಯ ಮಾತನಾಡ್ತಿದ್ದಾರೆ ಅಷ್ಟೇ ಅದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮಚಂದ್ರನ ಭಕ್ತರು, ನಾವು ಶ್ರೀರಾಮಚಂದ್ರನ ಪೂಜೆ ಮಾಡುತ್ತೇವೆ. ಕೇದ್ರ ಸಚಿವರುಗಳು ರಾಜಕೀಯ ಮಾತನಾಡುತ್ತಿದ್ದಾರೆ ಅಷ್ಟೇ. ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ ಎಂದು ಕಿಡಿಕಾರಿದರು
ನಾವು ಶ್ರೀರಾಮಚಂದ್ರನ ವಿರುದ್ಧವಿಲ್ಲ. ಶ್ರೀರಾಮಚಂದ್ರನನ್ನ ನಾವು ಗೌರವಿಸುತ್ತೇವೆ, ಪೂಜೆ ಮಾಡುತ್ತೇವೆ. ಭಜನೆ ಮಾಡುತ್ತೇವೆ. ರಾಮಮಂದಿರಕ್ಕೆ ನಮ್ಮದು ವಿರೋಧವಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಯಡಿಯೂರಪ್ಪನವರು ಆರೋಪಕ್ಕೆ ಕಿಡಿಕಾರಿದ ಅವರು, ಈಗ ಯಾಕೆ ಇವರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಶ್ರೀರಾಮಚಂದ್ರ ಇಲ್ಲಿ ಇಲ್ವಾ? ಇಲ್ಲೂ ಎಲ್ಲಾ ಪೂಜೆ ಮಾಡುತ್ತಿದ್ದಾರೆ. ಅಷ್ಟೇ ಎಂದು ಸಿಎಂ ತಿರುಗೇಟು ಕೊಟ್ಟರು.