ಮಂಡ್ಯ: ಇದೇ ತಿಂಗಳ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡದ ಕುರಿತಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಕಿಡಿಕಾರಿದ್ದಾರೆ. ನಮ್ಮ ನಾಡಿನ ಮುಖ್ಯಮಂತ್ರಿಯನ್ನೇ ಅವರು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುತ್ತಿಲ್ಲ ಎಂದರೆ ಅವರು (ಬಿಜೆಪಿಗರು) ಎಷ್ಟು ರಾಜಕೀಯ ಮಾಡುತ್ತಾರೆ ನೋಡಿ ಎಂದು ಅವರು ಹೇಳಿದ್ದಾರೆ.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ, ಸಾಮಾಜಿಕ, ಸಿನಿಮಾ, ಕ್ರೀಡೆ ಸೇರಿದಂತೆ ಆಯಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನು ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿಲ್ಲ. ಈ ಮೂಲಕ ಬಿಜೆಪಿಗರು ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯವರ ನಡುವಳಿಕೆ ಖಂಡನೀಯ ಎಂದು ತಿಳಿಸಿದ ಅವರು, ರಾಮ ಎಲ್ಲರಿಗೂ ಸೇರಿದ ದೇವರು. ರಾಮಮಂದಿರ ಕಟ್ಟಿರೋದಕ್ಕೆ ಬಿಜೆಪಿಯವರಿಗಿಂತ ನಾವೇ ಹೆಚ್ಚು ಖುಷಿಪಡುತ್ತೇವೆ. ಆದರೆ, ಬಿಜೆಪಿ ಮಾತ್ರ ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.