ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವು. ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರೇ ನಮ್ಮ ನಾಯಕರಾದ ರಾಜೀವ ಗಾಂಧಿ ಅವರು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದರು. ಸುದ್ದಿಗಾರರ ಜೊತೆಗೆ ಮಾತನಾಡಿದರು. ‘ ಬಿಜೆಪಿಯವರಷ್ಟೇ ಅಲ್ಲ,
ನಾವು ಕೂಡ ರಾಮ ಭಕ್ತರಿದ್ದೇವೆ ಎನ್ನುವ ಮೂಲಕ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ವಿಚಾರವನ್ನು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಜೆಂಡವನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಅಂತಹದ್ದನ್ನ ಬಿಟ್ರೆ ಏನು ಅಜೆಂಡ ಮಾಡುವುದಕ್ಕಿದೆ? 36 ಜನರಲ್ಲಿ ಇವರು ಒಬ್ಬರೇನಾ ಹಿಂದು ಇರೋದು? ಅವರ ಮೇಲೆ ಇನ್ನು 20 ಕೇಸ್ ಗಳಿವೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಬೇಕು.
India’s richest person: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಆಗ ಆಗಿರುವ ಘಟನೆಗೂ ಪ್ರಕರಣಗಳು ಇರುತ್ತವೆ. ಅವರಿಗೂ ಕೂಡ ಈ ಪ್ರಶ್ನೆ ಕೇಳಿ ನೀವು ಎಂದು ಖಾರವಾಗಿ ಹೇಳಿದರು. ರಾಮ ಮಂದಿರ ಪ್ರಾರಂಭ ಮಾಡಿದವರೇ ನಾವು. ನಮ್ಮ ನಾಯಕರಾದ ರಾಜೀವ್ ಗಾಂಧಿ ಮಂದಿರಕ್ಕೆ ಅಡಿಗಲ್ಲು ಹಾಕಿದರು. ನಾವೂ ರಾಮನ ಪರವಾಗಿ ಇದ್ದೇವೆ. ಕಳೆದ 40 ವರ್ಷಗಳಿಂದ ಇಟ್ಟಂಗಿ ಕೊಟ್ಟವಲ್ಲ ಎಲ್ಲಿವೆ? ನಾವು ಕೂಡ ರಾಮ ಭಕ್ತರಿದ್ದೇವೆ. ಎಲ್ಲರಿಗೂ ಸಮ ಬಾಳು, ಎಲ್ಲರಿಗೂ ಸಮ ಪಾಲು ಅಂತಾ ಬದುಕುತ್ತಿದ್ದೇವೆ ಎಂದರು.