ಸದ್ಯ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಬಂಧನವಾಗಿದ್ದು ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಘಟನೆಯ ಕುರಿತು ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಪ್ರಕರಣದ ಕುರಿತು ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿರುವ ಚೇತನ್, ನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರು ಎಂಬುದಾಗಿ ತಿಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)