ನವದೆಹಲಿ:- ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಲ್ಲಿಸಲಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್: ನಿಮ್ಮ ಏರಿಯಾ ಇದೇನಾ ಚೆಕ್ ಮಾಡಿ!
ಪ್ಲಾಸ್ಟಿಕ್ ಮತ್ತು ಪೆಟ್ ಬಾಟಲಿಗಳಲ್ಲಿನ ಆಹಾರ ಪದಾರ್ಥ ಸೇವನೆಯಿಂದ ಮೈಕ್ರೋ ಲೆವೆಲ್ ಪ್ಲಾಸ್ಟಿಕ್ ಹಂತ-ಹಂತವಾಗಿ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುತ್ತಿದೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಫೈಬರ್ ಅಂಶವಿರುವ ಮತ್ತು ಪ್ಲಾಸ್ಟಿಕ್ನಂತಹ ಪ್ಯಾಕೆಟ್ಗಳಲ್ಲಿನ ಆಹಾರ ಸೇವನೆಯಿಂದ ಇಂದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಇಂದು ಬಹುತೇಕ ಜಂಕ್ ಫುಡ್ಗಳನ್ನೆಲ್ಲ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲೇ ಹಾಕಿ ನೀಡಲಾಗುತ್ತದೆ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ, ಸಮಾರಂಭಗಳಲ್ಲಿ ಇಂಥ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಲು ನಿರ್ದೇಶಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ವರ ಮಾರ್ಗದರ್ಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪೆಟ್ ಬಾಟಲ್ ಬಳಕೆಯನ್ನು ಕೈ ಬಿಟ್ಟಿದ್ದೇವೆ. ನಮ್ಮ ದೇಶದಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.