ಬೆಂಗಳೂರು:-ಕನ್ನಡಿಗರ ಸಂಪ್ರದಾಯದಿಂದ ನಮಗೆ ಕಿರಿಕಿರಿ ಆಗಿದೆ ಎಂದು ರಂಗೋಲಿ ಕೇಸ್ ನ ನೇಹಾ ಅಳಲು ತೋಡಿಕೊಂಡಿದ್ದಾರೆ.
ಅಲ್ಲದೇ ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಯುವತಿ ನೇಹಾ ಪ್ರಶ್ನೆ ಹಾಕಿದ್ದಾಳೆ.
ಇನ್ಮುಂದೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳು ಇರೋದು ಇಲ್ಲ – ನಿತಿನ್ ಗಡ್ಕರಿ!
ಅಷ್ಟಕ್ಕೂ ಈ ನೇಹಾ ಯಾರು ಅಂದುಕೊಂಡ್ರಾ!? ಬೇರೆ ಯಾರು ಅಲ್ಲ ಬೆಂಗಳೂರಿನ ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ ಮನೆಯ ಮುಂದಿನ ರಂಗೋಲಿ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕೇಸ್ ನ ಆರೋಪಿತ ಸ್ಥಾನದಲ್ಲಿ ಇರುವ ನೇಹಾ.
ಎಸ್ ಬೊಮ್ಮನಹಳ್ಳಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಅಕ್ಕ-ಪಕ್ಕದ ಮನೆಯವರ ಜಗಳ ಬೀದಿ ರಂಪವಾಗಿದ್ದೂ ಅಲ್ಲದೇ, ಪೊಲೀಸ್ ಠಾಣೆ ಮೆಟ್ಟಿಲೇರಿ ಈಗ ಜಗಜ್ಜಾಹೀರಾಗಿದೆ. ಈ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಕನ್ನಡಿಗರ ಕುಟುಂಬಕ್ಕೆ ಹಿಂದೂ ಸಂಪ್ರದಾಯದಂತೆ ಮನೆ ಮುಂದೆ ರಂಗೋಲಿ ಹಾಕುವುದು, ತುಳಸಿ ಗಿಡ ಇಡುವುದು, ಬಾಗಿಲಿಗೆ ಬಳ್ಳಿ ಹಬ್ಬಿಸುವುದು, ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಮತ್ತು ಶೂ ರ್ಯಾಕ್ ಇಡುವುದು ಅಭ್ಯಾಸವಿದೆ. ಇದು ಅವರ ಸಂಪ್ರದಾಯವಂತೆ. ಆದರೆ, ಇವರ ಮನೆಯ ಪಕ್ಕದಲ್ಲಿದ್ದ ಫ್ಲ್ಯಾಟ್ ಅನ್ನು ಉತ್ತರ ಭಾರತದಿಂದ ಬಂದ ನಾವು ಖರೀದಿಸಿ ವಾಸವಾಗಿದ್ದೇವೆ. ಆದರೆ, ಕನ್ನಡಿಗರ ಮನೆಯಿಂದ ಸಂಪ್ರದಾಯದಿಂದ ನಮಗೆ ಇನ್ನಿಲ್ಲದ ಕಿರಿಕಿರಿ ಆಗಿದೆ ಎಂದು ಯುವತಿ ನೇಹಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.