ಬೆಳಗಾವಿ:- ಗೋಮಾಂಸ ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೈಕ್ ಮೂಲಕ ಅಜಾನ್ ಕೂಗುವುದು ಸುಪ್ರೀಂ ಕೋರ್ಟ್ ಪ್ರಕಾರ ನಿಷೇಧ ಇದೆ. ಮೈಕ್ ಮೂಲಕ ಅಜಾನ್ ಕೂಗುತ್ತಿದ್ದರೂ ಪೊಲೀಸರೇನು ಕಿವಿಯಲ್ಲಿ ಹತ್ತಿ, ಶಗಣಿ ಹಾಕೊಂಡಿದ್ದಾರಾ? ಅಜಾನ್ ನೀವು ನಿಲ್ಲಿಸ್ತಿರೋ, ನಾವು ನಿಲ್ಲಿಸೋಣವೋ ಎಂದು ಪೊಲೀಸರಿಗೆ ಮುತಾಲಿಕ್ ಪ್ರಶ್ನೆ ಮಾಡಿದರು. ನಾವು ಗೋಹಂತಕರನ್ನು ವಿರೋಧಿಸುವುದನ್ನು ಬಿಟ್ಟು ಪೂಜೆ ಮಾಡಬೇಕೆ? ರಾಜ್ಯದಲ್ಲಿರುವುದು ನೀಚ ಕಾಂಗ್ರೆಸ್ ಸರ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳು ಮಾಂಸ ತಿನ್ನುತ್ತಾರೆ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗೋಹತ್ಯೆ ಮಾಡಿ ಗೋಮಾಂಸ ತಿನ್ನುವುದನ್ನು ನಾವು ವಿರೋಧಿಸುತ್ತೇವೆ. ಹಲವು ರಾಜಕೀಯ ನಾಯಕರು, ಬುದ್ಧಿಜೀವಿಗಳು ಸೊಕ್ಕಿನಿಂದ ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಿದ್ದಾರೆ. ಗೋಮಾಂಸ ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ. ಗೋಮಾಂಸ ತಿನ್ನುತ್ತೇವೆ ಎನ್ನುವ ನೀವು ಹಂದಿ ಏಕೆ ತಿನ್ನಲ್ಲ? ಆಕಳನ್ನು ತಿಂದ್ರೆ ನಮಗೆ ಸಿಟ್ಟು ಬರುತ್ತದೆ. ಈ ದೇಶದಲ್ಲಿ ಇರಲಾಗದಿದ್ರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಕಿಡಿ ಕಾರಿದರು.