ದಾವಣಗೆರೆ:- ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರಕ್ಕೆ ಮಾಜಿ ಶಾಸಕ MP ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ಮುಂದಾದರೆ ಬಿಜೆಪಿ ಜೊತೆ ರಾಜ್ಯದ ಜನರೂ ಕೂಡ ರೊಚ್ಚಿಗೇಳ್ತಾರೆ, ಕ್ರಾಂತಿ ಆಗುತ್ತೆ” ಅಂತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿಯ ಹಲವು ನಾಯಕರು ಟಿಪ್ಪು ನಾಮಕರಣ ವಿರೋಧಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಲು ವಿರೋಧವಿದೆ. ಈ ಮೈಸೂರು ಎನ್ನುವುದು ಮಹಾರಾಜರು ಆಳಿದಂತಹ ಪವಿತ್ರ ಭೂಮಿ. ಆದರೆ ಟಿಪ್ಪು ಒಬ್ಬ ಮತಾಂದ, ದೇಶದ್ರೋಹಿ, ಹಿಂದುಗಳ ಪವಿತ್ರ ದೇವಾಲಯ ನಿರ್ನಾಮ ಮಾಡಿದವನು. ಹಿಂದೂಗಳನ್ನು ಮುಸ್ಲಿಂ ಆಗಿ ಮತಾಂತರ ಮಾಡಿದ ಮತಾಂಧ ಟಿಪ್ಪು ಹೆಸರಿಡಲು ಕಾಂಗ್ರೆಸ್ನ ಕೆಲ ನಾಯಕರು ಹೇಳಿದ್ದಾರೆ. ಇದಕ್ಕೆ ಬಿಜೆಪಿ ವಿರೋಧ ಇದೆ ಎಂದಿದ್ದಾರೆ.