ಕೇರಳದ ವೈನಾಡು ಗುಡ್ಡ ಕುಸಿತ ಪ್ರಕರಣ. ಗುಡ್ಡಿ ಕುಸಿದು ಕಣ್ಮರೆಯಾಗಿದ್ದ ರಾಜೇಂದ್ರ (50) ಅವರ ಮೃತದೇಹ ಬುಧವಾರ ತಡ ರಾತ್ರಿ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದ ವಾಸಿ ರಾಜೇಂದ್ರರವರು ಕಳೆದ 50 ವಷ೮ಗಳಿಂದ ಪತ್ನಿ ರತ್ನಮ್ಮ ಜೊತೆ ಸೇರಿ ಟೀ ಎಸ್ಟೇಟ್ ವೊಂದರಲ್ಲಿ ಕೆಲಸ ಮಾಡ್ತಾ ಇದ್ರು. ಕಳೆದ 6 ತಿಂಗಳಲ್ಲಿ ಗೃಹ ಪ್ರವೇಶ ಮಾಡಿದ್ರು.
ಮಕ್ಕಳಿಲ್ಲದ ದಂಪತಿಗಳು ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮದಿಂದ ಕೇರಳಕ್ಕೆ ತೆರಳಿ ಜೀವನ ರೂಪಿಸಿಕೊಂಡಿದ್ರು ಆದರ ಯಮ ಸ್ವರೂಪಿ ಗುಡ್ಡ ಕುಸಿತ ಇಬ್ಬರ ಜೀವವನ್ನೂ ಬಲಿ ಪಡೆದಿದೆ. ರಾಜೇಂಂದ್ರರವರ ಮೃತ ದೇಹ ಬುಧವಾರ ರಾತ್ರೀ ಕೇರಳದ ನೆಲಂಭೂರು ಬಳಿ ದೊರೆತಿದೆ. ಆದರೆ ಅವರ ಪತ್ನಿ ರತ್ನಮ್ಮ ಮೃತ ದೇಹ ಇನ್ನೂ ಕೂಡ ಸಿಕ್ಕಿಲ್ಲ. ಬುಧವಾರ ತಡ ರಾತ್ರಿ ಕೇರಳದ ಮೆಪ್ಪಾಡಿಯ ಸ್ಮಶಾನ ಭೂಮಿಯಲ್ಲಿ ರಾಜೇಂದ್ರವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.