ತುಮಕೂರು: ಗ್ರಾ.ಪಂ ವಾಟರ್ ಮ್ಯಾನ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಡಿವೈಎಸ್ ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕುಣಿಗಲ್ ಡಿವೈಎಸ್ ಪಿ ಓಂ ಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಮಾಧವ ನಾಯಕ್, ಅಮೃತ್ತೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಮಂತ್ ಗೌಡ, ಎಸ್ ಎಚ್ ಓ ದಯಾನಂದ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಮಾರ್ಚ್ 23ರಂದು ವಾಟರ್ ಮ್ಯಾನ್ ಗಂಗಾಧರ್ ಅವರನ್ನು ವಿಚಾರಣೆ ನೆಪದಲ್ಲಿ ಕುಣಿಗಲ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಮೃತ್ತೂರು ಹೋಬಳಿಯ ಕೆ.ಹೆಚ್ ಹಳ್ಳಿ ಗ್ರಾ.ಪಂನ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರೋ ಗಂಗಾಧರ್ ಅವರನ್ನು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೇ ಕರೆದುಕೊರಮಡು ಹೋಗಲಾಗಿತ್ತು. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
ಮಲಗುವ ಮುನ್ನ ಒಂದು ಲೋಟ ಜಾಯಿಕಾಯಿ ಹಾಕಿದ ಹಾಲನ್ನು ಕುಡಿಯಿರಿ ಸಾಕು. ! ಆಮೇಲೆ ಚಮತ್ಕಾರ ನೋಡಿ
ಗಂಗಾಧರ್ ಅವರನ್ನು ಕರೆದುಕೊಂಡು ಹೋದ ಪೊಲೀಸರು ಸಂಜೆ ವೇಳೆ ಬಿಟ್ಟಿದ್ದರು. ಈ ನಡುವೆ ಅವರಿಗೆ ಬಾಸುಂಡೆ ಬರುವಂತೆ ಬಾರಿಸಿದ್ದರು ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿದೆ.