ತುಮಕೂರು:- ನೀರಲ್ಲಿ ಸ್ಪೋಟ ಕೇಸ್ ಗೆ ಸಂಬಧಪಟ್ಟಂತೆ ಡ್ರೋನ್ ಪ್ರತಾಪ್ಗೆ ಜಾಮೀನು ಮಂಜೂರು ಮಾಡಿ ಮಧುಗಿರಿ ಜೆಎಮ್ಎಫ್ಸಿ ಕೋರ್ಟ್ ಆದೇಶ ಹೊರಡಿಸಿದೆ.
ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಸ್ಫೋಟಿಸಿ ಜೈಲು ಸೇರಿರುವ ಡ್ರೋನ್ ಪ್ರತಾಪ್ಗೆ ಜಾಮೀನು ಮಂಜೂರಾಗಿದೆ. ಜಾಮೀನು ಪ್ರಕ್ರಿಯೆ ಮುಗಿಯಲು ಇನ್ನೂ ಎರಡು ದಿನಗಳ ಕಾಲ ಸಮಯ ಬೇಕಾಗಿದ್ದರಿಂದ ಗುರುವಾರ ಪ್ರತಾಪ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಸದ್ಯ ಡ್ರೋನ್ ಪ್ರತಾಪ್ ಮಧುಗಿರಿಯ ಉಪ ಕಾರಾಗೃಹದಲ್ಲಿ ಇದ್ದಾನೆ.
ಮಧುಗಿರಿಯ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಸ್ಫೋಟಿಸಿ ಡ್ರೋನ್ ಪ್ರತಾಪ್ ಎಡವಟ್ಟು ಮಾಡಿಕೊಂಡಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿತ್ತು. ಬಳಿಕ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.