ಬೆಳಗಾವಿ: ಒಂದು ಕಡೆ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಬಿಡಲಾಗುತ್ತಿದ್ದು, ಬೆಳಗಾವಿ ನಗರದಲ್ಲಿ ಕೂಡಿಯು ನೀರಿಗೂ ಹಾಹಾಕಾರ ಆರಂಭವಾಗುತ್ತಿದೆ.
ನೀರಾವರಿ ಯೋಜನೆಗಳಿಗಾಗಿ ನಾನು ಸದಾ ಹೋರಾಟ ಮಾಡೋಕೆ ಸಿದ್ದ: ಮಾಜಿ ಪ್ರಧಾನಿ ದೇವೇಗೌಡ
ಕಳೆದ ಕೆಲವು ವರ್ಷಗಳ ಹಿಂದೆ ಬೆಳಗಾವಿ ನಗರದ ಜನತೆಗೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಕುಡಿಯುವ ನೀರಿನ ವ್ಯವಸ್ಥೆ ಇತ್ತು, ಅಭಿವೃದ್ಧಿ, ಹಾಳು, ಮೂಳು, ಮಣ್ಣು ಮಸಿ ಎಂದು ನಗರದ ಜನತೆಗೆ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರಿನ ಭಾಗ್ಯ ನೀಡಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲೆ ಬೆಳಗಾವಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಇದರ ಜೊತೆಗೆ ನಗರದ ಅನೇಕ ಭಾಗದಲ್ಲಿ ನೀರಿನ ಬವಣೆ ಆರಂಭವಾಗಿದೆ. ನೀರು ಇಲ್ಲದೆ ಜನ ಬಿದಿಗೆ ಬಂದಿದ್ದು, ದಯವಿಟ್ಟು ಪ್ರತಿನಿತ್ಯ ನೀರು ಬರವ ಹಾಗೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
2024ರಲ್ಲಿ ನಗರದಲ್ಲಿ ತುಂಬಾ ಚೆನ್ನಾಗಿ ಮಳೆ ಆಗಿದ್ದು, ಕುಡಿಯುವ ನೀರು ಪೂರೈಕೆಯ ಜಲಾಶಯಗಳು ಭರ್ತಿ ಆಗಿದ್ದವು, ಆದರೆ ಈಗಿನ್ನೂ ಫೆಬ್ರುವರಿ ತಿಂಗಳಲ್ಲೇ ನಗರಕ್ಕೆ ಎಂಟು ದಿನಗಳಿಗೆ ಒಮ್ಮೆ ನೀರು ನೀಡುತ್ತಿರುವುದು ಸಾಮಾನ್ಯವಾಗಿದೆ, ಈಗಾಗಲೆ ನಗರದ ಮಜಗಾವಿ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಎಂಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಪ್ರತಿನಿತ್ಯ ನೀರು ಬೇಕು ಎಂದರೆ ದುಡ್ಡು ಕೊಟ್ಟು ಜನರೇ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ನೀರಿನ ಕೊರೆತೆ ಆರಂಭವಾಗಿದ್ದು, ಟ್ಯಾಂಕರ್ ಮೂಲಕ ನೀರು ಖರೀದಿಸುವ ಪರಿಸ್ಥಿತಿ ಆರಂಭವಾಗಿದೆ. ಹಾಗಾಗಿ ಜನರಿಗೆ ನೀರಿನ ಕೋರತೆ ಎದುರಾಗದಂತೆ ಪಾಲಿಕೆ ಅಧಿಕಾರಿಗಳು ಶಾಸಕರು ಯಾವ ರೀತಿ ಕ್ರಮ ಕೈ ಗೊಳ್ಳುತ್ತಾರೆ ರಂದು ಕಾದು ನೋಡಬೇಕು.