ಬೆಂಗಳೂರು: ರೀಲ್ಸ್ ನೋಡಿ ಕಡಿಮೆ ಬೆಲೆಗೆ ಕಾರ್ ಖರೀದಿ ಮಾಡೋ ಮುನ್ನ ಎಚ್ಚರ. ಕದ್ದ ಕಾರು ಮಾರಾಟ ಮಾಡ್ತಿರೋ ಜಾಲ ಈಗ ಸಿಲಿಕಾನ್ ಸಿಟಿಯಲ್ಲಿ ಆಕ್ಟೀವ್ ಆಗಿದ್ದಾರೆ. ಇಂತಹದ್ದೇ ಕೆಲವನ್ನ ಫುಲ್ ಟೈಂ ಜಾಬ್ ಮಾಡಿಕೊಂಡು ಟೋಪಿ ಹಾಕುತ್ತಿದ್ದ ಗ್ಯಾಂಗ್ ನ್ನ ಪೋಲಿಸರು ಅರೆಸ್ಟ್ ಮಾಡಿ ಐಷಾರಾಮಿ ಕಾರುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಈಗೆಲ್ಲಾ ಸುಲಭವಾಗಿ ಯಾವುದೇ ವಸ್ತು ಗಳನ್ನ ಜನರಿಗೆ ತಲುಪುವಂತೆ ಮಾರ್ಕೆಟಿಂಗ್ ಮಾಡಬಹುದು .ಇನ್ಸ್ಟಾಗ್ರಾಮ್, ಯೂ ಟ್ಯೂಬ್ ನಲ್ಲಿ ಕಡಿಮೆ ಬೆಲೆಗೆ ಕಾರ್ ಸಿಗುತ್ತೆ ಅಂತ ಕಾರುಕೊಳ್ಳ ಕೊಳ್ಳೊ ಮುನ್ನ ಎಚ್ಚರ. ನೀವು ಖರೀದಿ ಮಾಡೋ ಕಾರುಗಳು ಕದ್ದ ಕಾರುಗಳು ಆಗಿರಬಹುದು. ಇಂಥಹದೊಂದು ಬೃಹತ್ ಜಾಲವನ್ನ ಸಿಸಿಬಿ ಪೊಲೀಸ್ರು ಪತ್ತೆಮಾಡಿದ್ದಾರೆ. ಹೊರ ರಾಜ್ಯ ಮತ್ತು ರಾಜ್ಯದಲ್ಲಿ.ಕದ್ದ ಕಾರುಗಳಿಗೆ ನಕಲಿ ದಾಖಲಾತಿ ಸೃಷ್ಟಿ ಮಾಡಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.ಸೈಯದ್ ರಿಯಾಜ್ ಹಾಗೂ ಆಸ್ಟಿನ್ ಕಾರ್ಡೋಸ್ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಕಮೀಷನರ್ ನೋಡಲೇಬೇಕಾದ ಸ್ಟೋರಿ : ನಿಮಗೆ ಮಾನವಿಯತೆ ಅನ್ನೋದೆ ಇಲ್ವಾ?
ಇನ್ನೂ ಈ ಬಂದಿತ ಆರೋಪಿಗಳು ಒಂದೇ ಕಾರಿನಲ್ಲಿ ಮೂಲ ಕಾರು ಮಾಲೀಕ, ಬ್ಯಾಂಕ್ ಮತ್ತು ಕಾರು ಖರೀದಿ ಮಾಡಿದವರಿಗೂ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.ಮೊದಲಿಗೆ ಹೊರ ರಾಜ್ಯದಲ್ಲಿ ಕಾರು ಕಳ್ಳತನ ಮಾಡುತ್ತಿದ್ದ ಆರೋಪಿಗಳುನಂತರ ಅದನ್ನು ಬೆಂಗಳೂರು ಸೇರಿ ವಿವಿಧ ನಗರದಲ್ಲಿ ನಕಲಿ ದಾಖಲಾತಿ ಸೃಷ್ಟಿ ಮಾಡ್ತಿದ್ರು. ಬ್ಯಾಂಕ್ ಸಾಲ ಇರುವ ವಾಹನಗಳಿಗೆ ಸಾಲ ತೀರಿರುವಂತೆ ನಕಲಿ ಎನ್ ಓಸಿ ಗಳನ್ನ ಸೃಷ್ಟಿ ಮಾಡ್ತಿದ್ರು. ಬಳಿಕ ಕಾರು ಖರೀದಿ ಮಾಡಲು ಬಂದವವರಿಗೆ ಕದ್ದ ಕಾರನ್ನು ನಕಲಿ ದಾಖಲೆ ನೀಡಿ ಮಾರಾಟ ಮಾಡ್ತಿದ್ರು. ಈ ಕಾರುಗಳನ್ನ ಮಾರಾಟ ಮಾಡಲು ಇನ್ಸ್ಟಾಗ್ರಾಮ್ ರೀಲ್ ಗಳಲ್ಲಿ ಕಾರುಗಳನ್ನ ಪ್ರಮೋಟ್ ಮಾಡ್ತಿದ್ರು.
ಹೀಗೆ ಇದುವರೆಗೆ ಒಟ್ಟು 40ಕ್ಕೂ ಹೆಚ್ಚು ಕಾರು ಮಾರಾಟ ಮಾಡಿದ್ದು ಬೆಳಕಿಗೆ ಬಂದಿದ್ದು, ಸದ್ಯ ಸಿಸಿಬಿ OCW ಪೊಲೀಸ್ರ ತಂಡ ಬಂಧಿತರಿಂದ ರೇಂಜ್ ರೋವರ್, ಜಾಗ್ವಾರ್, ಇನ್ನೋವಾ, ಫಾರ್ಚುನಾರ್ , ಸ್ಕೋಡಾ ರ್ಯಾಪಿಡ್ ಕಾರುಗಳು ಸೇರಿದಂತೆ 2.5 ಕೋಟಿ ಮೌಲ್ಯದ 17 ಕಾರುಗಳನ್ನ ಸೀಜ್ ಮಾಡಿದ್ದಾರೆ. ಯಾವುದಕ್ಕೂ ನೀವೇನಾದ್ರೂ ಈ ರೀತಿ ಕಾರು ಕೊಳ್ಳೊ ಐಡಿಯಾ ಇದ್ರೆ ಒಂದು ಸಾರಿ ಯೋಚನೆ ಮಾಡಿ..ಇಲ್ಲ ಅಂದ್ರೆ ನಿಮಗೂ ಟೋಪಿ ಬೀಳಬಹುದು ಎಚ್ಚರ…